21ರ ಯುವತಿ ಮೇಲೆ ಅತ್ಯಾಚಾರ ಎಸಗಿದ 47 ವರ್ಷದ ವ್ಯಕ್ತಿ…

59
firstsuddi

ಆನೇಕಲ್ : ಕೆಲಸಕ್ಕೆಂದು ಬುಕ್ ಮೈ ಬಾಯಿ ಎಂಬ ಆ್ಯಪ್ ಮೂಲಕ ಯುವತಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ ಘಟನೆ ತಾಲೂಕಿನ ಪರಪ್ಪನ ಅಗ್ರಹಾರ ವ್ಯಾಪ್ತಿಯ ಕೂಡ್ಲು ಬಡಾವಣೆಯಲ್ಲಿ ನಡೆದಿದೆ.

47 ವರ್ಷದ ಬಾಬು ಎಂಬಾತ ಈ ಹೇಯ ಕೃತ್ಯ ಎಸಗಿದ್ದು, ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?
ಬುಕ್ ಮೈ ಬಾಯಿ ಆ್ಯಪ್ ಮನೆಗೆಲಸಕ್ಕೆ ಮಹಿಳೆಯರನ್ನು ಒದಗಿಸುವ ಆನ್ ಲೈನ್ ಕಂಪನಿಯಾಗಿದ್ದು, ವಿಲ್ಸನ್ ಗಾರ್ಡನ್ ಬಳಿ ಕಚೇರಿ ಇದೆ. ಈ ಆ್ಯಪ್ ಮೂಲಕ ವೃದ್ಧೆ ತಾಯಿಯನ್ನು ನೋಡಿಕೊಳ್ಳಲೆಂದು ಬಾಬು ಒರಿಸ್ಸಾ ಮೂಲದ 21 ವರ್ಷದ ಯುವತಿಯನ್ನು ಕರೆಸಿಕೊಂಡಿದ್ದಾನೆ.

ಯುವತಿ ಮನೆಗೆ ಬಂದ ತಕ್ಷಣವೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಯಾರಿಗಾದರೂ ಹೇಳಿದರೆ ಕೊಲೆ ಮಾಡಿ ಬಿಡುತ್ತೇನೆ ಎಂದು ಜೀವಬೆದರಿಕೆ ಹಾಕಿ ಮನೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ತೆರಳಿದ್ದಾನೆ. ಬಳಿಕ ತನ್ನ ಬಳಿ ಇದ್ದ ಮೊಬೈಲ್ ನಿಂದ ಕಂಪನಿಗೆ ಕರೆ ಮಾಡಿದ ಯುವತಿ, ನಡೆದಿರುವ ಕೃತ್ಯವನ್ನು ಹೇಳಿಕೊಂಡಿದ್ದಾಳೆ.

ಕೂಡಲೇ ಎಚ್ಚೆತ್ತ ಕಂಪನಿ, ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಬಾಬುನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ನವೆಂಬರ್ 31ರ ರಾತ್ರಿ ಈ ಘಟನೆ ನಡೆದಿದ್ದು, ಡಿ.2 ರಂದು ಪರಪ್ಪನ ಅಗ್ರಹಾರ ಪೊಲೀಸರು ಸಂತ್ರಸ್ತೆಯಿಂದ ಹೇಳಿಕೆ ಪಡೆದುಕೊಂಡಿದ್ದರು.