21 ಟ್ರಸ್ಟ್, ಪ್ರತಿಷ್ಠಾನದ ನೇಮಕಾತಿ ಆದೇಶ ವಾಪಸ್ ಪಡೆದ ಸರ್ಕಾರ…

65
firstsuddi

ಬೆಂಗಳೂರು : 21 ವಿವಿಧ ಟ್ರಸ್ಟ್ ಗಳು ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಸಂಬಂಧ ಹೊರಡಿಸಿದ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ.

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನರೇಂದ್ರ ರೈ ದೇರ್ಲ ಅವರು ನಿರಾಕರಿಸಿದ್ದರು. ಅಲ್ಲದೇ ಪೂರ್ಣಚಂದ್ರ ತೇಜಸ್ವಿಯವರ ಪ್ರತಿಷ್ಠಾನಕ್ಕೆ ಕಳೆದ ವರ್ಷ ನಿಧನ ಹೊಂದಿದ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆದೇಶವನ್ನು ವಾಪಸ್‌ ಪಡೆದಿದೆ.