22ರ ಯುವಕನೊಂದಿಗಿನ ಅನೈತಿಕ ಸಂಬಂಧಕ್ಕೆ 35 ವರ್ಷದ ಆಂಟಿ ಬಲಿ…

72
firstsuddi

ಬೆಂಗಳೂರು: 22ರ ಯುವಕನೊಂದಿಗಿನ ಅನೈತಿಕ ಸಂಬಂಧಕ್ಕೆ 35 ವರ್ಷದ ಆಂಟಿ ಬಲಿಯಾಗಿರುವ ಘಟನೆ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಜೆಸಿ ನಗರದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಸರವಣಂ (35) ಎಂದು ಗುರುತಿಸಲಾಗಿದೆ. ಆಟೋ ಚಾಲಕನಾಗಿದ್ದ ಗಣೇಶ್ ಎಂಬ 22ರ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಲ್ಲದೆ ಯುವಕನಿಗೆ 50 ಸಾವಿರ ಹಣ ಹಾಗೂ ಒಂದು ಮನೆಯನ್ನೂ ಸಹ ಮಾಡಿಕೊಟ್ಟಿದ್ದಳು. ಇಷ್ಟೆಲ್ಲಾ ಇದ್ದರೂ ಗಣೇಶ್ ಬೇರೆ ಹುಡುಗಿಯೊಂದಿಗೆ ಸಲುಗೆಯನ್ನು ಬೆಳೆಸಿಕೊಂಡಿದ್ದ. ಇದನ್ನು ತಿಳಿದ ಮಹಿಳೆ ಆತನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಬಳಿಕ ಆತ ಸಲುಗೆ ಬೆಳೆಸಿಕೊಂಡಿರುವ ಹುಡುಗಿ ಯಾರೆಂದು ಪ್ರಶ್ನಿಸಿದ್ದಾಳೆ. ಅಲ್ಲದೇ ತಾನು ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಇದರಿಂದಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದೆ.

ಈ ವೇಳೆ ಗಣೇಶ್ ಸಾಯುತ್ತೇನೆ ಎಂದು ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಇದನ್ನು ನೋಡಿದ ಮಹಿಳೆ ತಾನೂ ಕೂಡಾ ಸಾಯುವುದಾಗಿ ಕುಣಿಕೆ ಹಾಕಿಕೊಂಡಿದ್ದಾಳೆ. ಇದೇ ವೇಳೆ ಗಣೇಶ್ ಹಗ್ಗ ಎಳೆದು ಚೇರ್ ಒದ್ದಿದ್ದು, ಹಗ್ಗ ಕತ್ತಿಗೆ ಬಿಗಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಣೇಶ್‌ನನ್ನು ಬಂಧಿಸಲಾಗಿದೆ.