22,222 ಅಡಿ ಎತ್ತರದ ಶಿಖರವನ್ನು ಏರಿ ಭಾರತದ ಧ್ವಜವನ್ನು ಹಾರಿಸಿ ದೇಶದ ಕೀರ್ತಿಯನ್ನು ಮೆರೆದ ಸೈನಿಕರು…

587
firstsuddi

ಹಿಮಾಚಲ ಪ್ರದೇಶ : ಜಗತ್ತಿನಾಧ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದರೂ ಕೂಡಾ ಅಂಜದೇ ಇಂತಹ ಸಂಕಷ್ಟದ ಸಮಯದಲ್ಲೂ ಪರ್ವತರೋಹಿಗಳು 22,222 ಅಡಿ ಎತ್ತರದ ಶಿಖರವನ್ನು ಏರಿ ಭಾರತದ ಧ್ವಜವನ್ನು ಹಾರಿಸಿದ್ದಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯ ಉಪ ಕಮಾಂಡರ್ ಕುಲದೀಪ್ ಸಿಂಗ್ ಹಾಗೂ ಉಪ ಕಮಾಂಡೆಂಟ್ ಧರ್ಮೇಂದ್ರ ಅವರ ನೇತೃತ್ವದ 16 ಮಂದಿ ಸೈನಿಕರ ಪೈಕಿ 12 ಮಂದಿ ಸೈನಿಕರು ಯೋಜನೆಯಂತೆ ಕೊರೊನಾ ಸಂಕಷ್ಟದ ನಡುವೆಯೂ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವಿಶ್ವದ ಅತ್ಯಂತ ಎತ್ತರದ ಶಿಖರಗಳಲ್ಲಿ ಒಂದಾದ ಲಿಯೋ ಪಾರ್ಗಿಲ್ ಶಿಖರವನ್ನು ಏರಿ ಶಿಖರದ ಮೇಲೆ ಭಾರತದ ಧ್ವಜವನ್ನು ಹಾರಿಸಿ ದೇಶದ ಕೀರ್ತಿಯನ್ನು ಮೆರೆದಿದ್ದಾರೆ.