ಲಕ್ನೋ : 28 ವರ್ಷದ ಸೊಸೆಯನ್ನ 70 ವರ್ಷದ ಸ್ವಂತ ಮಾವನೇ ಮದುವೆಯಾಗಿರುವ ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.
ಗೋರಖ್‍ಪುರದ ಛಾಪಿಯಾ ಉಮ್ರಾವ್ ಗ್ರಾಮದ 70 ವರ್ಷದ ಕೈಲಾಶ್ ಯಾದವ್ ತನ್ನ 28 ವರ್ಷದ ಸೊಸೆ ಪೂಜಾಳನ್ನ ಮದುವೆಯಾಗಿದ್ದಾರೆ. ಬದಲ್ ಗಂಜ್ ಕೊತ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ಮದುವೆ ನಡೆದಿದೆ.
ಕೈಲಾಶ್ ಯಾದವ್ ಅವರ ಪತ್ನಿ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಕೈಲಾಶ್ ಅವರ ನಾಲ್ವರು ಮಕ್ಕಳಲ್ಲಿ ಮೂರನೇ ಮಗ, ಪೂಜಾಳನ್ನ ವಿವಾಹವಾಗಿದ್ದರು. ಆದರೆ ಪೂಜಾ ಪತಿಯೂ ಕೆಲ ವರ್ಷದ ಹಿಂದೆ ಸಾವನ್ನಪ್ಪಿದ್ದರು. ಇದಾದ ನಂತರ ಪೂಜಾ ತನ್ನ ಜೀವನವನ್ನು ಬೇರೆಡೆ ಸಾಗಿಸಲು ಹೊರಟಿದ್ದರು. ಆದರೆ ದಿನಕಳೆದಂತೆ ಸೊಸೆ ಮಾವನಿಗೆ ಮನಸೋತಳು.
ಇದೀಗ ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದಾರೆ. ಸದ್ಯ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾವ ಮತ್ತು ಸೊಸೆಯ ನಡುವಿನ ಸಂಬಂಧದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ.