ಮಹಾಮಾರಿ ಕೊರೊನಾ ವೈರಸ್‍ಗೆ ಕೇರಳದಲ್ಲಿ 2ನೇ ಬಲಿ…

154
firstsuddi

ತಿರುವನಂತಪುರಂ : ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕೇರಳದಲ್ಲಿ ಕೊರೊನಾ ವೈರಸ್‍ಗೆ 2ನೇ ಬಲಿಯಾಗಿದೆ. 68 ವರ್ಷದ ವೃದ್ಧ ಮಾರ್ಚ್ 16ರಂದು ದುಬೈನಿಂದ ಆಗಮಿಸಿದ್ದರು. ಬಳಿಕ ವೃದ್ಧನಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ಕೇರಳದ ತಿರುವನಂತಪುರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಕೇರಳದಲ್ಲಿ ಇದು 2ನೇ ಬಲಿಯಾಗಿದ್ದು, 234 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೇ ಭಾರತದಲ್ಲಿ ಸೋಂಕಿತರ ಸಂಖ್ಯೆ 1347ಕ್ಕೆ ಏರಿಕೆಯಾಗಿದೆ.