35 ವರ್ಷಗಳ ಬಳಿಕ ಹೆಣ್ಣುಮಗು ಜನನ ; ಹೆಲಿಕಾಪ್ಟರ್ ನಲ್ಲಿ ಕರೆತಂದ ಕುಟುಂಬಸ್ಥರು..!

138
firstsuddi

ಜೈಪುರ್ : 35 ವರ್ಷಗಳ ನಂತರ ಕುಟುಂಬದಲ್ಲಿ ಹೆಣ್ಣುಮಗು ಜನಿಸಿದ ಕಾರಣ ಮಗುವನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆದುಕೊಂಡು ಬಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ನಾಗಪುರ ಜಿಲ್ಲೆಯ ಚಂದವತ ಗ್ರಾಮದ ಹನುಮಾತ್ ಪ್ರಜಾಪತ್ ಅವರ ರೈತ ಕುಟುಂಬದಲ್ಲಿ 35 ವರ್ಷಗಳಿಂದ ಹೆಣ್ಣುಮಗು ಜನಿಸಿರಲಿಲ್ಲ. ಇದೀಗ ಹೆಣ್ಣುಮಗು ಜನಿಸಿದ್ದು, ಆ ಮಗುವಿನ ಸ್ವಾಗತಕ್ಕಾಗಿ ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿದ್ದು, ಅದರಲ್ಲಿಯೇ ಮೊಮ್ಮಗಳನ್ನು ಸ್ವಾಗತಿಸಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ 35 ವರ್ಷಗಳ ನಂತರ ಕುಟುಂಬದಲ್ಲಿ ಜನಿಸಿದ ಮೊದಲ ಹೆಣ್ಣು ಮಗು ಇದಾಗಿದ್ದರಿಂದ ಮಗುವಿಗೆ ಈ ರೀತಿಯ ಭವ್ಯ ಸ್ವಾಗತ ಕೋರಲಾಗಿದೆ. ಬಾಡಿಗೆಗೆ ಹೆಲಿಕಾಪ್ಟರ್ ಪಡೆದು, ಸ್ವಾಗತ ಕಾರ್ಯಕ್ರಮಕ್ಕೆ ಒಟ್ಟು 4.5 ಲಕ್ಷ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ.