3ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ…

72
firstsuddi

ತಮಿಳುನಾಡು : ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. 150 ದಿನಗಳ ಕಾಲ ನಡೆಯುವ ಈ ಯಾತ್ರೆಯ ಸಾರಥ್ಯವನ್ನು ಸಂಸದ ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ. ಇಂದು ತಮಿಳುನಾಡಿನ ನಾಗರಕೋಯಿಲ್ ನಿಂದ ಯಾತ್ರೆ ಮುಂದುವರೆಸಿದ್ದು ಸಾವಿರಾರು ಕಾರ್ಯಕರ್ತರು, ಹಿರಿಯ ಮುಖಂಡರು ಭಾಗಿಯಾಗಿದ್ದಾರೆ.

2024 ರ ಚುನಾವಣೆಗೆ ಮುಂಚಿತವಾಗಿ ನರೇಂದ್ರ ಮೋದಿ ಸರ್ಕಾರವನ್ನು ಎದುರಿಸಲು ಕಾಂಗ್ರೆಸ್ ಪ್ರತಿತಂತ್ರವಾಗಿ ‘ಭಾರತ್ ಜೋಡೋ ಯಾತ್ರೆ’ಯನ್ನು ಪ್ರಾರಂಭಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಯಾತ್ರೆ ನಡೆಯಲಿದೆ.