48ನೇ ವಸಂತಕ್ಕೆ ಕಾಲಿಟ್ಟ ಸೋನು ಸೂದ್…

95
firstsuddi

ಹೈದರಾಬಾದ್ : ಬಾಲಿವುಡ್ ನಟ ಸೋನು ಸೂದ್ ಅವರು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು, ಅವರು ತಮ್ಮ ಸಹಚರರೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸಾಮಾಜಿಕ ಕಾರ್ಯಗಳ ಮೂಲಕವೇ ಜನಮಾನಸದಲ್ಲಿ ಉಳಿದುಕೊಂಡಿರುವ ರಿಯಲ್ ಹೀರೋಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.

1999ರಲ್ಲಿ ತಮಿಳು ಚಿತ್ರ ‘ಕಲ್ಲಾಳಾಗರ್’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು 2001 ರಲ್ಲಿ ‘ಶಹೀದ್-ಇ-ಅಜಮ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಬಹುಮುಖ ಪ್ರತಿಭೆಯಾದ ಸೋನು ಹಿಂದಿ, ಇಂಗ್ಲಿಷ್, ತಮಿಳು, ಕನ್ನಡ ಮತ್ತು ಪಂಜಾಬಿ ಒಟ್ಟು 5 ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.