ಮಂಡ್ಯ : ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುಳುಗನಹಳ್ಳಿ ಗ್ರಾಮದಲ್ಲಿ ಅಂಬರೀಶ್ ಅಭಿಮಾನಿಗಳು ವಿತರಿಸುತ್ತಿದ್ದ ಫುಡ್ ಕಿಟ್ ಕಾರ್ಯಕ್ರಮಕ್ಕೆ ನಟ ಅಭಿಷೇಕ್ ಅಂಬರೀಶ್ ಅವರು ಭೆಟಿ ನೀಡಿ ಫುಡ್ ವಿತರಣೆ ಮಾಡಿದರು.
ಈ ವೇಳೆ ಮುಂದೆ ರಾಜಕೀಯ ಪ್ರವೇಶ ಮಾಡುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್ ಅಂಬರೀಶ್ ಅವರು, ಭವಿಷ್ಯದಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು. ಜನ ಬಯಸಿದರೆ ಖಂಡಿತ ನಾನು ರಾಜಕೀಯಕ್ಕೆ ಬರುತ್ತೇನೆ. ಮದ್ದೂರಿಗಾಗಲಿ, ಮಂಡ್ಯಗಾಗಲಿ ಜಿಲ್ಲೆಯಲ್ಲಿರುವ ಏಳು ಕ್ಷೇತ್ರಗಳಿಗೂ ಒಳ್ಳೆಯ ಎಂಎಲ್ ಎಗಳು ಸಿಗಬೇಕು ಎಂದರು.
ಸಿಎಂ ಬದಲಾವಣೆಯಾಗುತ್ತಾರೆ ಎಂದು ಯಾರಿಗೂ ಗೊತ್ತಿರಲಿಲ್ಲ, ಯಾರಿಗಾದರೂ ಗೋತ್ತಿತ್ತಾ ಎಂದು ಅಭಿಷೇಕ್ ಕೇಳಿದರು. ಈ ವೇಳೆ ಅಭಿಮಾನಿಯೊಬ್ಬ ಬದಲಾವಣೆ ಆಗುತ್ತಾರೆ ಅಂತಾ ಗೊತ್ತಿದ್ರು ಬೊಮ್ಮಾಯಿ ಆಗ್ತಾರೆ ಅಂತಾ ಗೊತ್ತಿರಲಿಲ್ಲ ಎಂದರು. ನೋಡಿ ಭವಿಷ್ಯದಲ್ಲಿ ಏನು ಬೇಕಾದರು ಆಗಬಹದು, ಜನ ಬಯಸಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ಈ ಮೂಲಕ ರಾಜಕೀಯಕ್ಕೆ ಬರುವ ಸೂಚನೆಯನ್ನು ಅಭಿಷೇಕ್ ಅವರು ನೀಡಿದ್ದಾರೆ.










