5 ದಿನ ಭಾರೀ ಮಳೆ ಸಾಧ್ಯತೆ, ಪ್ರವಾಸಿಗರಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಎಚ್ಚರಿಕೆ…!

40

ಚಿಕ್ಕಮಗಳೂರು.: ಮುಂದಿನ ಐದು ದಿನಗಳ ಕಾಲ ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆ ಸರಿಯೋ ಸಾಧ್ಯತೆ ಇದ್ದು ಜಿಲ್ಲಾಡಳಿತ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಹಾಗೂ ಮಲೆನಾಡಿಗರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಕಳೆದ ಆರೇಳು ತಿಂಗಳಿಂದ ಮಲೆನಾಡಿನ ಅತ್ಯಂತ ಸಾಕಷ್ಟು ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯ ಪ್ರವಾಸಿ ತಾಣಗಳು ಹಚ್ಚ-ಹಸಿರಿನಿಂದ ಕಂಗೊಳಿಸುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನಿತ್ಯವೂ ಜಿಲ್ಲೆಯ ನಾನಾ ಪ್ರವಾಸಿ ತಾಣಗಳಿಗೆ ರಾಜ್ಯ ಅವರ ರಾಜ್ಯದಿಂದ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದೀಗ, ಮುಂದಿನ ಐದು ದಿನಗಳ ಕಾಲ ಮಲೆನಾಡಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ವರದಿ ನೀಡಿರುವ ಹಿನ್ನೆಲೆ ಜಿಲ್ಲಾಡಳಿತ ಪ್ರವಾಸಿಗರಿಗೆ ಹಾಗೂ ಮಲೆನಾಡಿಗರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಘಟ್ಟ ಪ್ರದೇಶಗಳ ನಿರಂತರ ಮಳೆಯಿಂದ ತುಂಗ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಹಾಗಾಗಿ, ಸ್ಥಳೀಯರಾಗಲಿ ಅಥವ ಪ್ರವಾಸಿಗರಾಗಲಿ ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಜಿಲ್ಲೆಯಲ್ಲಿ 5 ದಿನ ಆರೆಂಜ್ ಅಲರ್ಟ್ ಇದ್ದು, ವೀಕ್ ಎಂಡ್ ಎಂದು ಪ್ರವಾಸಕ್ಕೆ ಬರುವ ಪ್ರವಾಸಿಗರು ಭೂಮಿಯ ತೇವಾಂಶ ಹೆಚ್ಚಿರುವುದರಿಂದ ಚಾಲನೆ, ಟ್ರಕ್ಕಿಂಗ್, ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡುವ ವೇಳೆ ಜಾರುವ ಸಾಧ್ಯತೆ ಇದ್ದು, ಬೆಟ್ಟ-ಧರೆ ಕುಸಿಯುವ ಸಾಧ್ಯತೆಯೂ ಇರೋದ್ರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.