ಕೋಲ್ಕತ್ತಾ : ಕೊರೊನಾ ಇನ್ನೂ ಮುಗಿಯದ ಕಾರಣ ಮಾಸ್ಕ್ ಧರಿಸುವುದು ದೈನಂದಿನ ಭಾಗವಾಗಿದೆ. ಆದರೆ ಜನರು ಮಾಸ್ಕ್ ನಲ್ಲಿಯೂ ಕೂಡ ಟ್ರೆಂಡಿ ಹಾಗೂ ಫ್ಯಾಷನ್ ಅನ್ನು ಹುಡುಕುತ್ತಿದ್ದಾರೆ. ಇದೀಗ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉದ್ಯಮಿಯೊಬ್ಬರು ದುಬಾರಿ ಬೆಲೆಯ ಚಿನ್ನದ ಮಾಸ್ಕ್ ಅನ್ನು ಖರೀದಿಸಿದ್ದಾರೆ.
ಆಭರಣದ ತಯಾರಕ ಚಂದನ್ ದಾಸ್ ಎಂಬವವರು ಕೇವಲ 15 ದಿನಗಳಲ್ಲಿ ಸ್ಥಳೀಯ ಉದ್ಯಮಿಗಳೊಂದಿಗೆ ಸೇರಿ 5.70 ಲಕ್ಷ ರೂಪಾಯಿ ಮೌಲ್ಯದ, 108 ಗ್ರಾಂ ಚಿನ್ನದ ಮಾಸ್ಕ್ ಅನ್ನು ಸಿದ್ದಪಡಿಸಿದ್ದಾರೆ.
ಇನ್ನೂ ಈ ಮಾಸ್ಕ್ ಅನ್ನು ಪತ್ರಕರ್ತೆ ರಿತುಪರ್ಣ ಚಟರ್ಜಿ ಎಂಬವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಕೆಲವರು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಷ್ಟು ಸಂಪತ್ತನ್ನು ಹೊಂದಿರುವವರು, ಕಾಯಿಲೆಯಿಂದ ತಮ್ಮ ಜೀವವನ್ನು ಕಳೆದುಕೊಂಡ ಸಾವಿರಾರು ಬಡ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಅಸಭ್ಯವಾಗಿ ಸಂಪತ್ತಿನ ಪ್ರದರ್ಶನ ಮಾಡುತ್ತಿದ್ದಾರೆ ಎಂದಿದ್ದಾರೆ.










