ಮೂಡಿಗೆರೆ: ಬೂದು ಬಣ್ಣದ ಐದು ವರ್ಷದ ಹೆಣ್ಣು ಕಾಳಿಂಗ ಸೆರೆ…

1294

ಮೂಡಿಗೆರೆ: ಬೂದು ಬಣ್ಣದಿಂದ ಕೂಡಿರೋ ಐದು ವರ್ಷದ ಹೆಣ್ಣು ಕಾಳಿಂಗವೊಂದು ತಾಲೂಕಿನ ನೇರಂಕಿ ಗ್ರಾಮದಲ್ಲಿ ಸೆರೆಯಾಗಿದ್ದು, ರಾಮದಾಸ್ ಗೌಡ ಎಂಬುವರ ತೋಟದಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟಿದ್ದು, ತೋಟದ ಕೂಲಿ ಕಾರ್ಮಿಕರು ನೋಡಿ ಸುಮ್ಮನಾಗಿದ್ರು. ಆದ್ರೆ, ತೋಟದಲ್ಲೆಲ್ಲಾ ಓಡಾಡ್ತಿದ್ದ ಕಾಳಿಂಗ ಕೂಲಿ ಕಾರ್ಮಿಕರಲ್ಲಿ ಭಯ ಮೂಡಿಸಿತ್ತು. ಕೊನೆಗೆ ದೊಡ್ಡದಾದ ಬಿಲ ಸೇರಿಕೊಂಡಿದ್ದನ್ನ ಕಂಡ ಕೂಲಿಯಾಳುಗಳು, ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ತೋಟದ ಮಾಲೀಕ, ಉರಗ ತಜ್ಞ ಆರೀಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಟ್ಟು ಬಿಲದೊಳಗಿದ್ದ ಕಾಳಿಂಗೆಯನ್ನ ಸೆರೆ ಹಿಡಿದಿದ್ದಾರೆ. ಬೂದು ಬಣ್ಣದಿಂದ ಕೂಡಿರೋ ಈ ಸರ್ಪ ಹೆಣ್ಣು ಕಾಳಿಂಗವಾಗಿದೆ. ಗಂಡು ಜಾತಿಗೆ ಸೇರಿದ ಕಾಳಿಂಗಗಳು ಕಪ್ಪನೆ ಬಣ್ಣದಿಂದ ಕೂಡಿರುತ್ತೆ. ಇದು ಬೂದು ಬಣ್ಣದಲ್ಲಿದ್ದು ಹೆಣ್ಣು ಎಂದು ಹೇಳಲಾಗುತ್ತಿದೆ.