50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್.

87
firstsuddi

ಬೆಂಗಳೂರು : ಇಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಜನ್ಮದಿನ. ಅವರು ಈಗ 50ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ಅಂಗವಾಗಿ ಕಿಚ್ಚನಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸುದೀಪ್ ಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಕೊವಿಡ್ ಕಾರಣದಿಂದ ಸುದೀಪ್ ಬರ್ತ್ ಡೇ  ಆಚರಣೆ ಮಾಡಿಕೊಳ್ಳುತ್ತಿಲ್ಲ ಅನ್ನೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿರುವ ಸುದೀಪ್ರವರು ಮಂಜಪ್ಪ ಮತ್ತು ಸರೋಜ ದಂಪತಿಯ ಪುತ್ರ. 2003ರಲ್ಲಿ ಸುದೀಪ್ರವರು ತಮ್ಮ ಗೆಳತಿ ಪ್ರಿಯಾ ಜೊತೆ ಸಪ್ತಪದಿ ತುಳಿದರು. ಸದ್ಯ ಈ ಮುದ್ದಾದ ಜೋಡಿಗೆ ಸಾನ್ವಿ ಎಂಬ ಪುತ್ರಿ ಇದ್ದಾರೆ.

ತಮ್ಮ ಸಿನಿ ಜರ್ನಿಯಲ್ಲಿ ಸಾಕಷ್ಟು ಏಳು ಹಾಗೂ ಬೀಳುಗಳನ್ನು ಕಂಡರೂ ಸುದೀಪ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ, ಎಲ್ಲೆಡೆ ಕನ್ನಡಿಗರ ಪ್ರತಿಭೆಯನ್ನು ಬಿಂಬಿಸುತ್ತಿದ್ದಾರೆ. ನಾಯಕ ನಟರಾಗಿ ಮಾತ್ರವಲ್ಲದೇ ಖಳ ನಾಯಕನ ಪಾತ್ರದಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡ ಸುದೀಪ್ ಗೆ ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲದೇ ಹಲವು ಚಿತ್ರರಂಗಗಳಲ್ಲಿಯೂ ಅಪಾರ ಅಭಿಮಾನಿ ಬಳಗವಿದೆ.