ಕೊಪ್ಪಳ : ತಂದೆ ಸಮಾದಿ ಬಳಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಕಿ…

80
firstsuddi

ಕೊಪ್ಪಳ : ತಂದೆಯ ಸಮಾದಿ ಬಳಿ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ.

ಜಿಲ್ಲೆಯ ಕುಷ್ಟಗಿ ಪಟ್ಟಣದ ಸ್ಪಂದನ ತನ್ನ ಎಂಟನೇ ವರ್ಷದ ಹುಟ್ಟುಹಬ್ಬವನ್ನು ಇತ್ತೀಚೆಗೆ ತಂದೆಯ ನೆನಪಲ್ಲಿ ಸಮಾಧಿ ಬಳಿ ಕೇಕ್ ಕಟ್ ಮಾಡಿ ಸಮಾಧಿಗೆ ಕೇಕ್ ಅರ್ಪಿಸಿರುವ ಮೂಲಕ ಆಚರಿಸಿಕೊಂಡಿದ್ದಾಳೆ.

ಸ್ಪಂದನ ತಂದೆ ಮಹೇಶ್ ಕೋನಸಾಗರ ಅವರಿಗೆ ಕಳೆದ ಮೇ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತಂದೆಯ ಸಮಾಧಿ ಬಳಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.