ಚೆನ್ನೈ: ತಮಿಳುನಾಡಿನಲ್ಲಿ ಕನಿಷ್ಠ 5300 ವರ್ಷಗಳ ಹಿಂದೆಯೇ ಕಬ್ಬಿಣ ಕರಗಿಸುವ ತಂತ್ರಜ್ಞಾನದ ತಿಳುವಳಿಕೆ ಇತ್ತು ಎಂಬುದನ್ನು ವಿಶ್ವಾಸದಿಂದ ಹೇಳುತ್ತೇನೆ ಎಂದು ಸಿಎಂ ಎಂಕೆ ಸ್ಟಾಲಿನ್ ನಿನ್ನೆ ಘೋಷಿಸಿದ್ದಾರೆ. ರಾಜ್ಯ ಪುರಾತತ್ವ ಇಲಾಖೆಯಿಂದ ಪ್ರಕಟವಾಗಿರುವ ಆಂಟಿಕ್ಷಿಟಿ ಆಫ್ ಐರನ್ ಎಂಬ ಸಂಶೋಧನಾ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ತೂತುಕುಡಿ ಜಿಲ್ಲೆಯ ಶಿವಗಲೈಯಲ್ಲಿ ಉತ್ಖನನ ನಡೆಸುವ ವೇಳೆ ಸಿಕ್ಕ ಕತ್ತಿಗಳು ಸೇರಿದಂತೆ ಕಬ್ಬಿಣದ ಕಲಾಕೃತಿಗಳು ಎಷ್ಟು ಕಾಲ ಹಿಂದಿನದು ಎಂಬುದನ್ನು ಪರೀಕ್ಷಿಸುವಾಗ ಈ ವಿಚಾರ ಬಯಲಿಗೆ ಬಂದಿದೆ. ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಶೈಕ್ಷಣಿಕ ಮತ್ತು ಸಂಶೋಧನಾ ಸಲಹೆಗಾರ ಪ್ರೊಫೆಸರ್ ಕೆ.ರಾಜನ್ ಮತ್ತು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ಆರ್ ಶಿವಾನಂದಂ ಈ ಪುಸ್ತಕವನ್ನು ಬರೆದಿದ್ದಾರೆ. ತಮಿಳಿಗರು ಅತ್ಯಂತ ಹಳೆಯ ಜನಾಂಗ ಎಂದು ಟೀಕೆಗಳ ಮಧ್ಯೆ, ಕಬ್ಬಿಣದ ಯುಗವು ತಮಿಳುನಾಡಿನ ನೆಲದಿಂದ ಪ್ರಾರಂಭವಾಯಿತು. 5300 ವರ್ಷಗಳ ಹಿಂದೆಯೇ ಕಬ್ಬಿಣ ಕರಗಿಸುವ ತಂತ್ರಜ್ಞಾನವನ್ನು ತಮಿಳುನಾಡು ಹೊಂದಿತ್ತು ಎಂಬುದನ್ನು ಮಾನವಶಾಸ್ತ್ರ ಸಂಶೋಧನೆ ಫಲಿತಾಂಶವನ್ನು ನಾನು ಈ ಜಗತ್ತಿಗೆ ಘೋಷಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದರು.










