55 ವರ್ಷದ ವ್ಯಕ್ತಿಯನ್ನು ವಿವಾಹವಾದ 18ರ ಯುವತಿ.. ಕಾರಣ ಕೇಳಿದ್ರೆ ಅಚ್ಚರಿ ಆಗ್ತೀರಾ!

63
firstsuddi

ಇಸ್ಲಾಮಾಬಾದ್ : 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಚ್ಚರಿಯ ಸಂಗತಿ ಎಂದರೆ, ಇವರಿಬ್ಬರು ಒಂದಾಗಲು ಹಿಂದಿ ಹಾಡೊಂದು ಕಾರಣವಂತೆ.

ಹೌದು. ಬಾಲಿವುಡ್ ನಟ ಬಾಬಿ ಡಿಯೋಲ್ ಅವರ ಸಿನಿಮಾ ಹಾಡುನಿಂದ 18 ವರ್ಷದ ಮುಸ್ಕಾನ್ ಮತ್ತು 55 ವರ್ಷದ ಫಾರೂಕ್ ನಡುವೆ ಪ್ರೀತಿ ಚಿಗುರೊಡೆದಿದೆ. ಮುಸ್ಕಾನ್ ಮತ್ತು ಫಾರೂಕ್ ಮನೆ ಸಮೀಪದಲ್ಲೇ ಇದ್ದು ಮುಸ್ಕಾನ್ ಸಂಗೀತವನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಮಾತ್ರವಲ್ಲದೆ, ಉತ್ತಮ ಹಾಡುಗಾರ್ತಿಯಾಗಿದ್ದಳು.

ಇತ್ತ ನೆರೆಮನೆಯ ಫಾರೂಕ್ ಗೆ ಸಂಗೀತ ಕೇಳುವುದೆಂದರೆ ಇಷ್ಟ. ಹೀಗಾಗಿ ಫಾರೂಕ್ ಆಗಾಗ ಮುಸ್ಕಾನ್ ಮನೆಗೆ ಬರುತ್ತಿದ್ದನು. ಹೀಗೆ ಮನೆಗೆ ಬರುತ್ತಿದ್ದ ಫಾರೂಕ್ ಗೆ ಮುಸ್ಕಾನ್ ಮೇಲೆ ಲವ್ ಆಗುತ್ತೆ. ಈ ವಿಚಾರ ಮುಸ್ಕಾನ್ ಗಮನಕ್ಕೂ ಬರುತ್ತದೆ. ಆಕೆಯೂ ಆತನನ್ನು ಇಷ್ಟಪಡಳು ಪ್ರಾರಂಭಿಸಿದಳು.

ಫಾರೂಕ್ ಗಾಗಿ ಮುಸ್ಕಾನ್ ಬಾಬಿ ಡಿಯೋಲ್ ಅವರ ‘‘ಬಾದಲ್ ನಾ ಮಿಲೋ ಹಮ್ಸೆ ಜ್ಯಾದಾ’’ ಹಾಡನ್ನು ಹಾಡುತ್ತಿದ್ದಳು. ಹೀಗೆ ಇವರಿಬ್ಬರು ಪ್ರೀತಿಯತ್ತ ಮುಖ ಮಾಡುವ ಸಮಯದಲ್ಲಿ ಮುಸ್ಕಾನ್ ಆತನಿಗೆ ಪ್ರಪೋಸ್ ಮಾಡಿದಳು. ಆ ಬಳಿಕ ಇವರಿಬ್ಬರ ಲವ್ ಶುರುವಾಯ್ತು. ಫಾರೂಕ್ ಮತ್ತು ಮುಸ್ಕಾನ್ ನಡುವಿನ ಪ್ರೀತಿಯನ್ನು ಎರಡೂ ಮನೆಯವರು ತಿರಸ್ಕರಿಸಿದ್ದರಂತೆ. ಆದರೆ ಈ ಜೋಡಿ ಯಾರಿಗೂ ಭಯ ಬೀಳದೆ ತಮ್ಮ ಸ್ವಂತ ಇಷ್ಟದಂತೆಯೇ ವಿವಾಹವಾಗಿದ್ದಾರೆ. ಅಂದಹಾಗೆ, ಫಾರೂಕ್ ವಯಸ್ಸು 55 ವರ್ಷವಾಗಿದ್ದರು ಇದು ಅವರ ಮೊದಲ ಮದುವೆಯಂತೆ.