6 ಸ್ಥಳಗಳನ್ನು ಟಾರ್ಗೆಟ್ ಮಾಡಿದ್ನಾ ಕುಕ್ಕರ್ ಬಾಂಬರ್ ಶಾರೀಕ್?

17
firstsuddi

ಮಂಗಳೂರು : ಮಂಗಳೂರಿನ ಬಾಂಬ್ ಸ್ಫೋಟದ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಈ ನಡುವೆ ಕುಕ್ಕರ್ ಬಾಂಬರ್ ಶಾರೀಕ್ ದಕ್ಷಿಣ ಕನ್ನಡ ಜಿಲ್ಲೆಯ ಈ ಆರು ಸ್ಥಳಗಳನ್ನು ಟಾರ್ಗೆಟ್ ಮಾಡಿದ್ದನಾ ಅನ್ನೋ ಅನುಮಾನ ಮೂಡಿದೆ. ಶಾರೀಕ್ ಮೊಬೈಲ್ ನಲ್ಲಿ ಯಾವ ಸ್ಥಳಗಳನ್ನು ಸರ್ಚ್ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ.

ಟಾರ್ಗೆಟ್ ಆಗಿದ್ದ ಸ್ಥಳಗಳು ಯಾವುದು?
ಕದ್ರಿಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ನಡೆಯುತ್ತಿದೆ. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಸಂದರ್ಭದಲ್ಲೇ ಸ್ಪೋಟ ಮಾಡುವ ಬಗ್ಗೆ ಸಂಚು ರೂಪಿಸಿದ್ದನಾ ಎಂಬ ಪ್ರಶ್ನೆ ಎದ್ದಿದೆ.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ ಟಾರ್ಗೆಟ್ ಮಾಡಲು ಶಿವನ ಡಿಪಿ ಹಾಕಿಕೊಂಡಿದ್ದನಾ ಎಂಬುದರ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.

ಮಂಗಳೂರಿನ ಮಂಗಳಾದೇವಿ ದೇವಸ್ಥಾನ ಅಥವಾ ಅದರ ಪರಿಸರದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದನಾ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಂಗಳೂರಿನ ಪಡೀಲು ಬಳಿ ಇರುವ ರೈಲ್ವೇ ನಿಲ್ದಾಣ ಮತ್ತು ಬಿಜೈನಲ್ಲಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸ್ಫೋಟಿಸಲು ಶಾರೀಕ್ ಪ್ಲಾನ್ ಮಾಡಿದ್ದನಾ ಅನ್ನೋದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇಲ್ಲಿ ಸಾಕಷ್ಟು ಜನಸಂದಣಿ ಹೊಂದಿರುತ್ತದೆ.

ಆರ್ ಎಸ್ ಎಸ್ ಪ್ರಮುಖ ಕಚೇರಿ ʼಸಂಘನಿಕೇತನʼ ಇರುವ ಮಣ್ಣಗುಡ್ಡವನ್ನು ಶಾರೀಕ್ ಸರ್ಚ್ ಮಾಡಿದ್ದಾನೆ. ಸ್ಫೋಟಗೊಂಡ ದಿನ ಸಂಘನಿಕೇತನದಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶ ನಡೆಯುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಕ್ಕಳ ಮಾರಣಹೋಮಕ್ಕೆ ರಾಕ್ಷಸ ಸಂಚು ರೂಪಿಸಿದ್ದನಾ ಅನ್ನೋ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.