ನವದೆಹಲಿ: ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಯನ್ನು 6 ರಿಂದ 12 ವರ್ಷದ ಮಕ್ಕಳಿಗೆ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಒಪ್ಪಿಗೆ ನೀಡಿದೆ.
ಈಗಾಗಲೇ , 12 ರಿಂದ 18 ವರ್ಷ ವಯಸ್ಸಿನವರಿಗೆ ಡಿಸಿಜಿಐ ನಿಂದ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಲಾಗಿದ್ದು. ಇದನ್ನು ಪ್ರಸ್ತುತ 15-18 ವಯಸ್ಸಿನವರಿಗೆ ನೀಡಲಾಗುತ್ತಿದೆ. ಡಿಜಿಸಿಐ 5-12 ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬೆವಾಕ್ಸ್ ಗೆ ತುರ್ತು ಬಳಕೆಯ ಅಧಿಕಾರವನ್ನು ಸಹ ನೀಡಿದೆ. ಕಾರ್ಬೆವಾಕ್ಸ್ ಅನ್ನು ಪ್ರಸ್ತುತ 12-14 ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೋವಿಡ್ ವಿರುದ್ಧದ ಭಾರತದ ಹೋರಾಟವು ಈಗ ಪ್ರಬಲವಾಗಿದೆ. ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ 6-12 ವರ್ಷ ವಯಸ್ಸಿನವರಿಗೆ ಕೊವ್ಯಾಕ್ಸಿನ್, 5-12 ವರ್ಷ ವಯಸ್ಸಿನವರಿಗೆ ಕಾರ್ಬೆವಾಕ್ಸ್ ಮತ್ತು ZyCoV-D ಗೆ ನಿರ್ಬಂಧಿತ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ ಎಂದು ತಿಳಿಸಿದ್ದಾರೆ.










