60ನೇ ವಸಂತಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.

63
firstsuddi

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಂದು 60ನೇ ವರ್ಷದ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ.

ಕರುನಾಡ ಚಕ್ರವರ್ತಿ, ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕಾರಣ ಸಹೋದರ ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವು ಇನ್ನು ಸೆಂಚುರಿ ಸ್ಟಾರ್ ಗೆ ಕಾಡುತ್ತಿರುವುದು. ಹೀಗಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಹ್ಯಾಟ್ರಿಕ್ ಹೀರೋ ನಿರ್ಧರಿಸಿದ್ದಾರೆ. ಆದರೂ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಬೆಳಗ್ಗೆಯಿಂದಲೇ ನಾನಾ ರಂಗದ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ನೆಚ್ಚಿನ ನಟನಿಗೆ ಶುಭಾಶಯ ಹೇಳಿದ್ದಾರೆ.

ಶಿವರಾಜ್ ಕುಮಾರ್ ಹುಟ್ಟು ಹಬಕ್ಕಾಗಿ ಅವರ ನಟನೆಯ ಹಲವು ಸಿನಿಮಾಗಳ ಪೋಸ್ಟರ್ಸ್ ರಿಲೀಸ್ ಆಗಿವೆ. ಅಲ್ಲದೇ, ಕೆಲ ಸಿನಿಮಾಗಳ ಟೈಟಲ್ ಕೂಡ ಲಾಂಚ್ ಮಾಡಲಾಗಿದೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಶಿವರಾಜ್ ಕುಮಾರ್ ನಟನೆಯ ಚಿತ್ರಕ್ಕೆ ‘45’ ಎಂದು ಹೆಸರಿಡಲಾಗಿದೆ. ಶ್ರೀ ನಿರ್ದೇಶನದ ಘೋಸ್ಟ್, ಯೋಗರಾಜ್ ಭಟ್ ನಿರ್ದೇಶನದ ಮತ್ತು ಪ್ರಭುದೇವ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಹೊಸ ಸಿನಿಮಾ ಹಾಗೂ ಸಚಿನ್ ಆರ್ ಅವರ ಹೊಸ ಸಿನಿಮಾದ ಪೋಸ್ಟರ್ ಗಳು ಕೂಡ ಇಂದು ಬಿಡುಗಡೆ ಆಗಿವೆ.

ಕಳೆದ 15 ವರ್ಷಗಳಿಂದ ಶಿವರಾಜ್ ಕುಮಾರ್, ಹೆಬ್ಬಾಳ ಬಳಿಯಿರುವ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ವಾಸವಾಗಿದ್ದಾರೆ. ಮಾನ್ಯತಾ ರೆಸಿಡೆನ್ಸಿಯ ನಾಗರಿಕರು ಸೇರಿ ಈಗ ಮಾನ್ಯತಾ ರೆಸಿಡೆನ್ಸಿ ಬಳಿಯಿರುವ ವೃತ್ತಕ್ಕೆ ಡಾ.ಶಿವರಾಜ್ ಕುಮಾರ್ ಎಂದು ಹೆಸರು ಇಟ್ಟಿದ್ದಾರೆ.