60 ವರ್ಷಗಳಲ್ಲೇ ಮೊದಲ ಬಾರಿಗೆ ಚೀನಾ ಜನಸಂಖ್ಯೆ ಕುಸಿತ…

41
firstsuddi

ಬೀಜಿಂಗ್ : ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾದಲ್ಲಿ 60 ವರ್ಷಗಳಲ್ಲೇ ಮೊದಲ ಬಾರಿಗೆ ಜನಸಂಖ್ಯೆ ಕುಸಿತವಾಗಿದೆ. 1.4 ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಜನರಿಗೆ ವಯಸ್ಸಾದಂತೆ ಜನನದ ದರ ತೀವ್ರವಾಗಿ ಇಳಿಕೆಯಾಗುತ್ತಿದೆ ಎನ್ನಲಾಗುತ್ತಿದೆ.

2022ರ ಅಂತ್ಯದ ವೇಳೆಗೆ ಚೀನಾದ ಜನಸಂಖ್ಯೆ ಸುಮಾರು 141,17,50,000 ರಷ್ಟಿತ್ತು ಎಂದು ಬೀಜಿಂಗ್ ನ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಇಂದು ವರದಿ ಮಾಡಿದೆ. 2021ರ ವರ್ಷದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು 8,50,000 ರಷ್ಟು ಜನಸಂಖ್ಯೆ ಇಳಿಕೆಯಾಗಿದೆ.

ಜನಸಂಖ್ಯೆಯ ತೀವ್ರ ಕುಸಿತವು ಆರ್ಥಿಕ ಕುಸಿತಕ್ಕೆ ಸಹ ಕಾರಣವಾಗಬಹುದು ಎಂದು ಹಣಕಾಸು ವಿಶ್ಲೇಷಕರು ಚೀನಾ ಸರ್ಕಾರವನ್ನು ಎಚ್ಚರಿಸಿದ್ದಾರೆ.

1960ರಲ್ಲಿ ಉಂಟಾದ ಆ ಭೀಕರ ಕ್ಷಾಮದಿಂದ ಚೀನಾದ ನಾಗರಿಕರು ತತ್ತರಿಸಿಹೋಗಿದ್ದರು. ಅದೇ ಮೊದಲ ಬಾರಿಗೆ ಆಗ ಚೀನಾ ಜನಸಂಖ್ಯೆ ಇಳಿಕೆಯಾಗಿತ್ತು. ಅಲ್ಲದೇ ಚೀನಾ ಒಂದು ಮಗುವಿನ ನೀತಿಯನ್ನು 1980ರ ದಶಕದಲ್ಲಿ ಜಾರಿಗೆ ತಂದಿತ್ತು. ಇದೂ ಸಹ ಜನಸಂಖ್ಯೆಯ ಇಳಿಕೆಗೆ ಕಾರಣವಾಗಿತ್ತು. ಈ ನೀತಿಯನ್ನು 2016ರಲ್ಲಿ ಕೊನೆಗೊಳಿಸಿ, 2021ರಲ್ಲಿ ದಂಪತಿಗೆ 3 ಮಕ್ಕಳನ್ನು ಹೊಂದಲು ಅವಕಾಶ ನೀಡಿತು.