65ರ ವರನ ಜೊತೆ 30ರ ಮಹಿಳೆಯ ಮದುವೆ- ವಿಶೇಷ ದಂಪತಿಗೆ ಶುಭ ಹಾರೈಸಿದ ಗ್ರಾಮಸ್ಥರು…

46
firstsuddi

ಚಿಕ್ಕಬಳ್ಳಾಪುರ: 65 ವರ್ಷದ ವರನೊಂದಿಗೆ 30 ವರ್ಷದ ಮಹಿಳೆ ಮದುವೆಯಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದಿದೆ.

ಈರಣ್ಣ(65) ಹಾಗೂ ಅನು (30) ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿಯಾಗಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಮದುವೆ ಕಾರ್ಯಕ್ರಮ ನೆರವೇರಿದೆ. ಮದುವೆಗೆ ಗ್ರಾಮಸ್ಥರು ಭಾಗಿಯಾಗಿ ವಿಶೇಷ ದಂಪತಿಗೆ ಶುಭ ಹಾರೈಸಿದ್ದಾರೆ.

ವಧು ಶಿಡ್ಲಘಟ್ಟ ತಾಲೂಕಿನ ಮೇಲೂರು ನಿವಾಸಿಯಾಗಿದ್ದು, ಆರು ತಿಂಗಳ ಹಿಂದೆ ಈರಣ್ಣ ಪತ್ನಿ ನಿಧನರಾಗಿದ್ದರು. ಇದರಿಂದ ಸಂಗಾತಿ ಇಲ್ಲದ ಕೊರತೆಯನ್ನು ತುಂಬಿಕೊಳ್ಳಲು ಈರಣ್ಣ ಎರಡನೇ ಮದುವೆಯಾಗಿದ್ದಾರೆ.