8 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ.

55
firstsuddi

ನವದೆಹಲಿ : ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡುತ್ತಿದ್ದ ಕಾರಣಕ್ಕಾಗಿ ಕೇಂದ್ರ ಸರ್ಕಾರ 8 ಯೂಟ್ಯೂಬ್ ಸುದ್ದಿ ಚಾನಲ್ ಗಳನ್ನು ನಿರ್ಬಂಧಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ ನಿಯಮ -2021 ರ ಅಡಿಯಲ್ಲಿ 7 ಸ್ವದೇಶಿ ಮತ್ತು ಪಾಕಿಸ್ತಾನದ ಒಂದು ಯೂಟ್ಯೂಬ್ ಸುದ್ದಿ ಚಾನೆಲ್ ಗಳನ್ನು ಬ್ಯಾನ್ ಮಾಡಿದೆ.

ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್ ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ ಮತ್ತು 85 ಲಕ್ಷ 73 ಸಾವಿರ ಚಂದಾದಾರರನ್ನು ಹೊಂದಿದೆ. ಯೂಟ್ಯೂಬ್ ನಲ್ಲಿ ನಿರ್ಬಂಧಿಸಲಾದ ಚಾನೆಲ್ ಗಳಿಂದ ನಕಲಿ ಭಾರತ-ವಿರೋಧಿ ವಿಷಯವನ್ನು ಹಣಗಳಿಸಲಾಗುತ್ತಿದೆ ಎಂದು ಹೇಳಲಾಗಿದೆ.