ಸುಣ್ಣದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು…

345
firstsuddi

ವಿಜಯಪುರ : ಜಿಲ್ಲೆಯ ತ್ರಿಕೋಟ ಪಟ್ಟಣದ ವಾಸಿಯಾದ ವಿಶ್ವನಾಥ ತಾಳಿಕೋಟೆ ಎಂಬುವರ ಒಂಭತ್ತು ತಿಂಗಳ ಮಗು ಮನೆಯಲ್ಲಿ ಆಟವಾಡುತ್ತಿರುವಾಗ ಸುಣ್ಣದ ಡಬ್ಬಿಯನ್ನು ನುಂಗಿದ್ದು, ಇದನ್ನು ಗಮನಿಸಿ ತಕ್ಷಣವೇ ಆಸ್ಪತ್ರೆಗೆ ಪೋಷಕರು ಮಗುವನ್ನು ಕರೆದೊಯ್ದರು. ವೈದ್ಯರು ಮಗು ನುಂಗಿದ್ದ ಸುಣ್ಣ ಡಬ್ಬಿಯನ್ನ ಹೊರತೆಗೆದರು.ಆದರೆ ಡಬ್ಬಿಯಲ್ಲಿದ್ದ ಸುಣ್ಣ ಮಗುವಿನ ದೇಹದಲ್ಲಿ ಸೇರಿಕೊಂಡಿತ್ತು, ಹೀಗಾಗಿ ಮಗು ಮೃತಪಟ್ಟಿತ್ತು ಎನ್ನಲಾಗಿದ್ದು, ಘಟನೆ ತ್ರಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.