ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಬರ್ಬರ ಹತ್ಯೆ…

262
firstsuddi

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ತಬಿಬ್ ಲ್ಯಾಂಡ್ ಬಳಿ ನಡೆದಿದ್ದು, ಇಮ್ತೀಯಾಜ್ ಕಣವಿ (35) ಕೊಲೆಯಾದ ವ್ಯಕ್ತಿ , ಇವರನ್ನು ದಾವೂದ್ ನಾದಫ್ ಹಾಗೂ ಸಹಚರರು ಕೊಲೆ ಮಾಡಿದ್ದು, ಊಟಕ್ಕೆಂದು ಹೊರಗಡೆ ಬಂದಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಮ್ತೀಯಾಜ್ ಕಣವಿ ಹಾಗೂ ದಾವೂದ್ ನಾದಫ್ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿದ್ದು, ದಾವೂದ್ ಮತ್ತು ಸಹಚರರು ಇಮ್ತಿಯಾಜ್ ಕಣವಿಯನ್ನು ತಲ್ವಾರ್ ನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.