ದೆಹಲಿ: 19 ವರ್ಷದ ಯುವಕನೊಬ್ಬ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನೇ ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಸೂರಜ್ (19) ಕೊಲೆ ಮಾಡಿದ ಆರೋಪಿ. ತನ್ನ ವರ್ತನೆ ಹಾಗೂ ವಿದ್ಯಾಭ್ಯಾಸದ ಕುರಿತಾಗಿ ನಿಂದಿಸುತ್ತಿದ್ದ ಪೋಷಕರ ವಿರುದ್ಧ ಸೂರಜ್ ಕೋಪಗೊಂಡಿದ್ದು, ತಡರಾತ್ರಿ 3 ಗಂಟೆ ಸುಮಾರಿಗೆ ಕೋಣೆಯಲ್ಲಿದ್ದ ತನ್ನ ತಂದೆಗೆ ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾನೆ. ತಾಯಿಗೂ ಇರಿದಿದ್ದಾನೆ, ತಾಯಿ ಗಾಯಗೊಂಡು ಕೂಗಾಡುತ್ತಿದ್ದಾಗ, ಸಹೋದರಿಯ ಕತ್ತು ಇರಿದು ಕೊಂದಿದ್ದಾನೆ. ಈ ವೇಳೆ ಮಗಳನ್ನು ಕಾಪಾಡಲು ಬಂದ ತಾಯಿಯನ್ನು ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೈದ ಸೂರಜ್ ಬಚಾವ್ ಆಗಲು ನಮ್ಮ ಮನೆಗೆ ದರೋಡೆಕೋರರು ಬಂದು ನನ್ನ ತಂದೆ ತಾಯಿ, ತಂಗಿಯನ್ನು ಕೊಂದು ಹೋದರು ಎಂದಿದ್ದಾನೆ.ಪೋಲಿಸರು ವಿಚಾರಣೆಗೊಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡು ನನ್ನ ತಂಗಿ ಆಗಾಗಾ ನನ್ನ ಮೊಬೈಲ್ ಚೆಕ್ ಮಾಡಿ ಪೋಷಕರ ಬಳಿ ನನ್ನ ಚಟುವಟಿಕೆಗಳ ಬಗ್ಗೆ ತಿಳಿಸುತ್ತಿದ್ದಳು. ಅದಕ್ಕೆ ನನಗೆ ಪೋಷಕರು ಬೈಯುತ್ತಿದ್ದರು ಹಾಗಾಗಿ ಮೂವರನ್ನು ಕೊಂದುಬಿಟ್ಟೆ ಎಂದು ಪೊಲೀಸರ ಬಳಿ ಆರೋಪಿ ಹೇಳಿದ್ದಾನೆ.










