ಬೆಂಗಳೂರು: ಹೆಣ್ಣು ಮಗು ಜನಿಸಿತು ಎಂಬ ಕಾರಣಕ್ಕೆ 20 ದಿನದ ಹೆಣ್ಣು ಮಗುವನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬಾಣಸವಾಡಿಯ ಸುಬ್ಬನಪಾಳ್ಯದ ಬಳಿ ನಡೆದಿದ್ದು, ನೇಪಾಳ ಮೂಲದ ಗೋಕುಲ್ ಎಂಬಾತ ಸ್ವಿಮ್ಮಿಂಗ್ ಪೂಲ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ಈತ ಹೆಣ್ಣು ಮಗು ಜನಿಸಿದೆ ಎಂದು ಪ್ರತಿದಿನ ಹೆಂಡಿತಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ಮಗುವನ್ನು ತಾಯಿಯ ಮುಂದೆಯೇ ಕೊಂದಿದ್ದಾನೆ. ಈ ಬಗ್ಗೆ ಗೋಕುಲ್ ನ ಹೆಂಡತಿ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.










