ನಮ್ಮನ್ನು ಮುಜುಗರಕ್ಕೀಡು ಮಾಡುವ ಕೆಲವು ಸಂಗತಿಗಳಲ್ಲಿ ಬಾಯಿಯ ದುರ್ವಾಸನೆಯೂ ಒಂದು. ನಮಗೆ ಗೊತ್ತಾಗದೇ ನಮ್ಮ ಬಾಯಿಯಿಂದ ದುರ್ವಾಸನೆ ಹೊಮ್ಮುತ್ತಿರುವುದು ಗೊತ್ತಾದರೆ ಅತ್ಯಂತ ಮುಜುಗರ ಎದುರಾಗುತ್ತದೆ. ಬಾಯಿ ದುರ್ವಾಸನೆಗೆ ಅನೇಕ ಸರಳ ವಿಧಾನಗಳಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.ಅವುಗಳೆಂದರೆ,
• ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿಯೋಧಕ ಗುಣ ಇದ್ದು, ದಾಲ್ಚಿನಿಯನ್ನು ಹಾಗೆಯೇ ಸೇವಿಸಬಹುದು ಅಥವಾ ಚಹಾ ಇಲ್ಲವೇ ಬಿಸಿ ನೀರಿಗೆ ಹಾಕಿ ಸೇವಿಸುವುದ ಮೂಲಕ ಬಾಯಿ ದುರ್ವಾಸನೆಯನ್ನು ದೂರ ಮಾಡಬಹುದು.
• ಪುದೀನಾದ ಚಹಾ ಕುಡಿಯುವುದರಿಂದ ಅಥವಾ ಹಾಗೇ ಪುದೀನಾ ತಿನ್ನುವುದರಿಂದ ಬಾಯಿ ದುರ್ವಾಸನೆಯನ್ನು ಹೋಗಲಾಡಿಸಬಹುದು.
• ಏಲಕ್ಕಿ ಕಾಳುಗಳನ್ನು ಊಟದ ನಂತರ ಜಗಿಯುವುದರ ಮೂಲಕ ಅಥವಾ ಏಲಕ್ಕಿ ಚಹಾ ಕುಡಿಯುವುದರ ಮೂಲಕ ಬಾಯಿ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು.
• ಸೋಂಪನ್ನು ಊಟದ ನಂತರ ಸೇವಿಸುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ ಹಾಗೂ ಕಟ್ಟ ಉಸಿರಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಸಾಯಿಸುವುದಲ್ಲದೇ, ಗ್ಯಾಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
• ಪ್ರತಿ ದಿನ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ಬಾಯಿ ದುರ್ವಾಸನೆಯನ್ನು ನಿವಾರಿಸಬಹುದು.
• ಮೆಂತ್ಯ ಚಹಾ ಕುಡಿಯುವುದರ ಮೂಲಕವೂ ಬಾಯಿ ದುರ್ವಾಸನೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
• ಹಲ್ಲು ಉಜ್ಜಿದ ನಂತರ ಒಂದು ಲವಾಂಗವನ್ನು ಬಾಯಿಗೆ ಹಾಕಿ ಜಗಿಯುವುದರಿಂದ ಬಾಯಿ ದುರ್ವಾಸನೆಯನ್ನು ಕಡಿಮೆ ಮಾಡಬಹುದು.
• ಸಾಸಿವೆ ಎಣ್ಣೆಯನ್ನು ಕೆಲವು ಸೆಕೆಂಡ್ ಬಾಯಿಯಲ್ಲಿ ಇಟ್ಟುಕೊಂಡು ನಂತರ ಮುಕ್ಕಳಿಸುವ ಮೂಲಕ ಬಾಯಿ ದುರ್ವಾಸನೆಯನ್ನು ನಿವಾರಿಸಬಹುದು.
• ಜೀರಿಗೆ ಚಹಾ ಕುಡಿಯುವುದರ ಮೂಲಕ ಬಾಯಿ ದುರ್ವಾಸನೆಯನ್ನು ದೂರ ಮಾಡಬಹುದು.
• ಬೇಕಿಂಗ್ ಸೋಡಾ ಮತ್ತು ನಿಂಬೆಹಣ್ಣಿನ ಪೆಸ್ಟ್ ಮಾಡಿಕೊಂಡು ಪ್ರತಿನಿತ್ಯ ಹಲ್ಲು ಉಜ್ಜುವುದರ ಮೂಲಕ ಬಾಯಿ ದುರ್ವಾಸನೆಯನ್ನು ದೂರ ಮಾಡಬಹುದು.
• ಉಗುರು ಬೆಚ್ಚಗಿನ ನೀರಿಗೆ ಜೇನು ತುಪ್ಪ ಮಿಶ್ರಣ ಮಾಡಿ ಪ್ರತಿನಿತ್ಯ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ವಾಸನೆ ನಿವಾರಣೆಯಾಗುತ್ತದೆ.
• ಸೂರ್ಯಕಾಂತಿ ಬೀಜಗಳನ್ನು ಜಗಿಯುವುದರಿಂದ ಬಾಯಿ ದುರ್ವಾಸನೆಯನ್ನು ಕಡಿಮೆ ಮಾಡಬಹುದು.
• ಬಿಸಿ ನೀರಿಗೆ ನಿಂಬೆರಸವನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ವಾಸನೆಯನ್ನು ಹೋಗಲಾಡಿಸಬಹುದು.










