ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಗೆ ನವರಾತ್ರಿಯ ಮೂರನೇ ದಿನದ ವಿಶೇಷ ಪೂಜೆ…

615
firstsuddi

ಕಳಸ: ನವರಾತ್ರಿಯ ಮೂರನೆಯ ದಿನ ಶುಕ್ರವಾರ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿಯು ಸಿಂಹರೂಢಾ ಚಂದ್ರಘಂಟಾ ಅಲಂಕಾರಗೊಂಡು ಭಕ್ತರ ಭಕ್ತಿಯ ಪರಾಕಟಾಷ್ಟಕ್ಕೆ ಪಾತ್ರರಾದಳು.ಬೆಳಗ್ಗೆ ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರ ಕಾಂಡ ಪಾರಾಯಣ,ಕುಂಕುಮಾರ್ಚನೆ ಮತ್ತು ಪುರುಷ ಸೂಕ್ತ ಹೋಮ ನಡೆಯಿತು.ಇವಳ ಸಿಂಹರೂಢಾ ಚಂದ್ರಘಂಟಾ ಸ್ವರೂಪವೂ ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧ ಚಂದ್ರನಿದ್ದಾನೆ. ಇವಳ ವಾಹನ ಸಿಂಹವಾಗಿದೆ. ಇದರಿಂದಲೆ ಇವಳನ್ನು ಸಿಂಹರೂಢ ಚಂದ್ರಘಂಟಾ ಎಂದು ಹೇಳಲಾಗುತ್ತದೆ. ಇವಳ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ ಇವಳಿಗೆ ಹತ್ತು ಕೈಗಳಿದ್ದೂ ಹತ್ತೂ ಕೈಗಳಲ್ಲಿ ಖಡ್ಗ ಶಸ್ತ್ರಗಳು ಹಾಗೂ ಭಾಣ ಇತ್ಯಾದಿ ಅಸ್ತ್ರಗಳು ವಿಭೂಷಿತವಾಗಿದೆ.ಇವಳ ಮುದ್ರೆಯು ಯುದ್ದಕ್ಕಾಗಿ ಹೊರಟಂತಿದೆ.ಇವಳ ಘಂಟೆಯಂತೆ ಭಯಾಣಕ ಚಂಡದ್ವನಿಯಿಂದ ಅತ್ಯಾಚಾರಿ ದಾಣವರು,ದೈತ್ಯರು,ರಾಕ್ಷಸರು ಯಾವಾಗಲೂ ನಡುಗುತ್ತಿರುತ್ತಾರೆ.ನಮ್ಮ ಮನ,ವಚನ,ಕರ್ಮ ಹಾಗೂ ಶರೀರವನ್ನು ವಿಹಿತ ವಿಧಿ-ವಿಧಾನಕ್ಕಾನುಸಾರವಾಗಿ ಪೂರ್ಣವಾಗಿ ಪರಿಶುದ್ದ ಮತ್ತು ಪವಿತ್ರವಾಗಿಸಿ ಜಗನ್ಮಾತೆ ಚಂದ್ರಘಂಟೆಗೆ ಶರಾಣಾಗತರಾಗಿ ಅವಳ  ಆರಾಧನೆಯಲ್ಲಿ ತತ್ಪರರಾಗಿರಬೇಕು ಅವಳ ಉಪಾಸನೆಯಿಂದ ನಾವು ಎಲ್ಲಾ ಸಾಂಸಾರಿಕ ಕಷ್ಟಗಳಿಂದ ಮುಕ್ತರಾಗಿ ಸಹಜವಾಗಿಯೇ ಪರಮ ಪದದ ಅಧಿಕಾರಿ ಆಗಬಲ್ಲೆವು ನಾವು ನಿರಂತರ ಅವಳ ಪವಿತ್ರ ವಿಗ್ರಹವನ್ನು ಧ್ಯಾನದಲ್ಲಿರುಸುತ್ತಾ ಸಾಧನೆಯತ್ತ ಮುಂದರಿಯುವ ಪ್ರಯತ್ನ ಮಾಡಬೇಕು.ಅವಳ ಧ್ಯಾನವು ನಮ್ಮ ಇಹಲೋಕ ಮತ್ತು ಎಡಕ್ಕಾಗಿ ಶ್ರೇಯಸ್ಕರ ಹಾಗೂ ಸದ್ಗತಿಯನ್ನು ಕೊಡುವಂತಹುದಾಗಿದೆ.ಶ್ರೀ ಕ್ಷೇತ್ರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕು||ಭೂಮಿಕಾ ಮಧುಸೂದನ್ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ,ಸಂಜೆ ಬಿ.ಆರ್.ಗಣಪತಿ ಸಾಗರ ಇವರಿಂದ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.