ಚಿಕ್ಕಮಗಳೂರು: ಎರಡು ದಿನಗಳಿಂದ ಮನೆಯೊಳಗೆ ಅವಿತು ಕುಳಿತಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಪ್ರಶಾಂತ್ ಎಂಬುವರ ಮನೆಯ ಆವರಣದಲ್ಲಿ ಎರಡು ದಿನಗಳಿಂದ ಕಾಳಿಂಗ ಬೀಡುಬಿಟ್ಟಿತ್ತು. ಸರ್ಪಗಳು ಒಂದೇ ಜಾಗದಲ್ಲಿ ಇರೋದಿಲ್ಲ. ಹೋಗುತ್ತೆ ಎಂದು ಪ್ರಶಾಂತ್ ಮನೆಯವರು ಕೂಡ ಸುಮ್ಮನಾಗಿದ್ದರು. ಆದರೆ ಎರಡು ದಿನವಾದರೂ ಕಾಳಿಂಗ ಜಾಗ ಖಾಲಿ ಮಾಡದ ಹಿನ್ನೆಲೆ ಪ್ರಶಾಂತ್ ಉರಗ ತಜ್ಞ ಹರೀಂದ್ರಾಗಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಹರೀಂದ್ರ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ, ಗಿಡಘಂಟೆ ಹಾಗೂ ಪೈಪ್ ಒಳಗೆ ಹೋಗಲು ಯತ್ನಿಸುತ್ತಿದ್ದ ಕಾಳಿಂಗನನ್ನು ಒಂದು ಗಂಟೆಗಳ ನಿರಂತರ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದು, ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ. ಬೃಹತ್ ಕಾಳಿಂಗನನ್ನು ಕಂಡ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ.









