ಬೆಂಗಳೂರು: ಮಿ-ಟೂ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ ಅವರು ಒಂದು ಒಳ್ಳೆಯ ಉದ್ದೇಶದಿಂದ ಮಿ-ಟೂ ಅಭಿಯಾನ ಆರಂಭಗೊಂಡಿದೆ. ಶೋಷಣೆಗೆ ಒಳಗಾದವರು ದೌರ್ಜ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರುವುದನ್ನು ಶ್ಲಾಘಿಸಲೇಬೇಕು. ಶೋಷಣೆಗೆ ಒಳಗಾದ ಎಲ್ಲರಿಗೂ ಪ್ರತಿಭಟಿಸುವ ಧೈರ್ಯ ಬೇಕಾಗುತ್ತದೆ ಹಾಗೂ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ. ಆದರೆ ಈ ಅಭಿಯಾನ ದುರುಪಯೋಗವಾಗಿ ಇನ್ನೊಬ್ಬರ ವೈಯಕ್ತಿಕ ಬದುಕು ಹಾಳು ಮಾಡುವಂತಾಗಬಾರದು ಎಂದಿದ್ದಾರೆ.










