ನಟ ರಿಷಿ ವಿರುದ್ಧ ಎಫ್ಐಆರ್ ದಾಖಲು…

387
firstsuddi

ಬೆಂಗಳೂರು: ಅಪರೇಷನ್ ಅಲುಮೇಲಮ್ಮ ಖ್ಯಾತಿಯ ನಟ ರಿಷಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು,ನಟ ರಿಷಿ ಬಸವೇಶ್ವರ ನಗರದಲ್ಲಿರುವ ತಮ್ಮ ತಾತನ ಮನೆಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದು, ಅಕ್ಟೋಬರ್ 10ರಂದು ನಟನ ಚಿಕ್ಕಮ್ಮ ವಿಕಲಚೇತನರಾದ ಶಾಲಿನಿ ಗೋಪಿನಾಥ್ ಅವರು  ತಮ್ಮ ತಂದೆಯನ್ನು ನೋಡಲು ಮನೆಗೆ ಹೋಗಿದ್ದ ಸಂದರ್ಭದಲ್ಲಿ ನಟ ರಿಷಿ ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕುವಂತೆ ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ರಿಷಿ ತಾಯಿ ಹಾಗೂ ತಂದೆ ಸೇರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಚಿಕ್ಕಮ್ಮ ಆರೋಪಿಸಿದ್ದರು.ಈ ಬಗ್ಗೆ ಅಕ್ಟೋಬರ್ 11 ರಂದು ಎನ್ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿಕೊಂಡು ಬಸವೇಶ್ವರ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.