ಕಾರು ಕೆರೆಗೆ ಉರುಳಿ ಇಬ್ಬರ ದುರ್ಮರಣ…

388
firstsuddi

ಮೈಸೂರು: ಕಾರು ಕೆರೆಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ರ್.ನಗರ ತಾಲೂಕಿನ ಭೇರ್ಯ ಗ್ರಾಮದ ಬಳಿ ನಡೆದಿದ್ದು, ದಶರಥ (27) ಮತ್ತು ಶಿವಣ್ಣ (28) ಮೃತರು ಪಿರಿಯಾಪಟ್ಟಣದ ದೇವೇಗೌಡನ ಕೊಪ್ಪಲು ಬಡಾವಣೆಯ ನಿವಾಸಿಗಳಾಗಿದ್ದು, ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಪಿತೃ ಪಕ್ಷ ಹಬ್ಬವನ್ನು ಮುಗಿಸಿಕೊಂಡು ಹಿಂತಿರುಗುವಾಗ ದೊಡ್ಡ ಕೆರೆ ಕೋಡಿ ಬಳಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ್ದು,ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.