ಮಹಿಳೆಯರನ್ನು ಶಬರಿಮಲೆಗೆ ತೆರಳದಂತೆ ತಡೆಯುತ್ತಿರುವ ಪ್ರತಿಭಟನಕಾರರು…

366
firstsuddi

ಕೇರಳ: ಶಬರಿಮಲೆಯ ಅಯ್ಯಪ್ಪ ದೇವಾಲಯವು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮೊದಲ ಬಾರಿಗೆ ದರ್ಶನಕ್ಕೆ ಬಾಗಿಲು ತೆರೆದಿದ್ದು, ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಅಯ್ಯಪ್ಪನ ದರ್ಶನಕ್ಕೆಂದು ಬರುತ್ತಿದ್ದ ಮಹಿಳೆಯರನ್ನು ಪ್ರತಿಭಟನಕಾರರು ತಡೆಯಲೆಂದೇ ಸಜ್ಜಾಗಿ ನಿಂತಿರುವ ಘಟನೆ ನಿಲಕ್ಕಳ್ ಬಳಿ ನಡೆದಿದ್ದು, ಕಲ್ಲು ತೂರಾಟದ ಘಟನೆಗಳೂ ಕೇಳಿಬರುತ್ತಿದ್ದು, ನೀಲಕಂಠ ಹೆಬ್ಬಾಗಿಲಿನಿಂದ ಗಿರಿ ದೇಗುಲಕ್ಕೆ ಸಾಗುವ 20 ಕಿ.ಮೀ. ಮಾರ್ಗದುದ್ದಕ್ಕೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.