ಕಳಸ: ಇಂಗ್ಲೇಂಡ್‍ಗೆ ತೆರಳಿ ಕೃಷಿ ಅಧ್ಯಯನ ಮುಗಿಸಿ ಮರಳಿದ ಕೃಷಿಕ ಹಂದಿಗೋಡು ರಾಮಚಂದ್ರ ಹೆಬ್ಬಾರ್ ದಂಪತಿಗಳನ್ನು ಡಾ|ರಾಜ್ ಕನ್ನಡ ಸಂಘ ಗೌರವಿಸಿದರು.ಪ್ರಜಾಪ್ರಭುತ್ವ ಅಧ್ಯಯನ ಸಮಿತಿಯ ವತಿಯಿಂದ ವಿವಿದ ರಾಜ್ಯಗಳಿಂದ ಐದು ಜನರ ತಂಡ ಇಂಗ್ಲೆಂಡ್‍ಗೆ ತೆರಳಿದ್ದರು.ಸುಮಾರು ಎಂಟು ದಿನದ ಪ್ರವಾಸ ಕೈಗೊಂಡಿದ್ದ ಇವರುಇಂಗ್ಲೇಂಡ್‍ನ ವಿವಿದ ಪ್ರದೇಶಗಳಿಗೆ ತೆರಳಿ ಕೃಷಿ ಅದ್ಯಯನ ನಡೆಸಿ ಮರಳಿದ್ದಾರೆ.ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ರಾಮಚಂದ್ರ ಹೆಬ್ಬಾರ್ ಇಲ್ಲಿಗಿಂತಲೂ ಇಂಗ್ಲೇಂಡ್ ನಲ್ಲಿ ಕೃಷಿ ಮಾಡುವ ವಿದಾನಗಳು ಅದ್ಬುತವಾಗಿದೆ.ಅತ್ಯಾದುನಿಕ ಯಂತ್ರಗಳನ್ನೆ ಬಳಸಿಕೊಂಡು ಇಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಂದು ಹಳ್ಳಿಗಳಲ್ಲೂ ಕೂಡ ಸ್ವಚ್ಚತೆ ಮತ್ತು ಕ್ರಮ ಬದ್ದವಾದ ವಾಹನ ಚಾಲನೆಯನ್ನು ಕಾಣಬಹುದು.ಆದರೆ ಕರ್ನಾಟಕ ಅದರಲ್ಲಿಯೂ ಮಲೆನಾಡಿನಲ್ಲಿರುವಂತಹ ಪ್ರಕೃತಿ, ಪರಿಸರ,ವಾತಾವರಣವನ್ನು ಮಾತ್ರ ಎಲ್ಲೂ ಕಾಣಲು ಸಾದ್ಯವಿಲ್ಲ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ರಾಜ್ ಕನ್ನಡ ಸಂಘದ ಅಧ್ಯಕ್ಷ ರಾಜು,ಕರವೇ ಅಧ್ಯಕ್ಷ ಸಂತೋಷ್, ಶ್ಯಾಮಾಚಾರಿ, ಚೌಡಪ್ಪ, ಗೋಪಾಲ, ರವಿ ಇತರರು ಇದ್ದರು.
Home ಸ್ಥಳಿಯ ಸುದ್ದಿ ಇಂಗ್ಲೇಂಡ್‍ಗೆ ತೆರಳಿ ಕೃಷಿ ಅಧ್ಯಯನ ಮುಗಿಸಿ ಮರಳಿದ ಕೃಷಿಕ ಹಂದಿಗೋಡು ರಾಮಚಂದ್ರ ಹೆಬ್ಬಾರ್ ದಂಪತಿಗಳನ್ನು ಗೌರವಿಸಿದ...










