ಸ್ತ್ರಿ ಸಮಾನತೆಯನ್ನು ಶಬರಿಮಲೆಯ ಪ್ರವೇಶದಿಂದ ಸಾಬೀತು ಪಡಿಸಬೇಕಿಲ್ಲ.- ಪ್ರತಾಪ ಸಿಂಹ…

426
firstsuddi

ಮೈಸೂರು: ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಪ್ರತಾಪ ಸಿಂಹ ಅವರು ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ, ಹಿಂದು ಧರ್ಮಕ್ಕೆ ಒಂದು ಗ್ರಂಥ, ಒಂದು ಪ್ರವಾದಿ ಎಂಬುದಿಲ್ಲ. ನಂಬಿಕೆ, ಆಚರಣೆಗಳ ತಳಹದಿ ಮೇಲೆ ಹಿಂದು ಧರ್ಮ ಸೃಷ್ಠಿಯಾಗಿದೆ. ಶಬರಿಮಲೆಗೆ 10 ವರ್ಷ ಮೇಲ್ಪಟ್ಟವರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ಇಲ್ಲ. ಸ್ತ್ರಿ ಸಮಾನತೆ ಹಿಂದು ಧರ್ಮದಲ್ಲಿ ಹಾಸುಹೊಕ್ಕಿದೆ. ಆದರೆ ಸ್ತ್ರಿ ಸಮಾನತೆಯನ್ನು ಶಬರಿಮಲೆಯ ಪ್ರವೇಶದಿಂದ ಸಾಬೀತು ಪಡಿಸಬೇಕಿಲ್ಲ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರು ಪರಿಶೀಲಿಸಬೇಕು ಎಂದಿದ್ದಾರೆ.