ಬೆಂಗಳೂರು: ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರವರು 12 ವರ್ಷಗಳ ನಂತರ ನಾನು ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಲ್ಲಿದ್ದೇವೆ. ಎರಡೂ ಪಕ್ಷಗಳು ಒಂದಾಗಿದ್ದರೂ ಸಣ್ಣಪುಟ್ಟ ಅಸಮಾಧಾನ ಇದೆ. ಇದನ್ನು ಹೋಗಲಾಡಿಸುವುದು ಸುಲಭವಲ್ಲ. ಮುಂದಿನ ದೇಶದ ಬದಲಾವಣೆ ರಾಜ್ಯದಿಂದಲೇ ಆಗಬೇಕಿದೆ.ಮುಂದಿನ 5 ಕ್ಷೇತ್ರಗಳ ಉಪಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲಿದ್ದೇವೆ .ದೇಶದ ಹಿತದೃಷ್ಠಿಯಿಂದ ನಾವು ಒಂದಾಗಬೇಕಿದೆ, ಎರಡೂ ಪಕ್ಷದ ಕಾರ್ಯಕರ್ತರು ಕೈ ಜೋಡಿಸಿ ನಾವು ಮಾಡಿರುವ ತಪ್ಪುಗಳನ್ನು ಕ್ಷಮಿಸಿ ಉಪಚುನಾವಣೆಯಲ್ಲಿ ನಮ್ಮ ಕೈ ಬಲಪಡಿಸಿ ಎಂದು ದೇವೇಗೌಡರವರು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.










