ಬೆಂಗಳೂರು: ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅರ್ಜುನ್ ಸರ್ಜಾ ಅವರು ಮೀಟೂ ಬಗ್ಗೆ ನನಗೆ ಗೌರವವಿದೆ. ಆದರೆ ಒಳ್ಳೆಯ ವಿಷಯಕ್ಕೆ ಇದನ್ನು ಬಳಸುವುದು ಉತ್ತಮ, ಸುಮ್ಮನೆ ಹೇಳೋದು ಸರಿಯಲ್ಲ.ಶೃತಿ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಇದೂವರೆಗೂ ನಾನು 60 ರಿಂದ 70 ನಟಿಯರ ಜೊತೆ ನಟಿಸಿದ್ದೇನೆ. ಯಾರೂ ಸಹ ಈ ರೀತಿಯ ಆರೋಪ ಮಾಡಿಲ್ಲ.ಇಂದಿಗೂ ಕೂಡ ಅವರೆಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ನನ್ನ ಜೀವನದಲ್ಲೇ ಇದು ದೊಡ್ಡ ಶಾಕ್. ಹೆಣ್ಣು ಮಕ್ಕಳ ಜೊತೆ ಆ ರೀತಿ ನಡೆದುಕೊಳ್ಳುವ ಚೀಪ್ ಮೆಂಟಾಲಿಟಿ ನನಗಿಲ್ಲ.ಒಂದು ಹುಡುಗಿಯನ್ನು ತಬ್ಬಿಕೊಂಡು ಸಂತೋಷ ಪಡುವ ನೀಚ ಬುದ್ಧಿ ನನಗಿಲ್ಲ. ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸರ್ಜಾ ಹೇಳಿದ್ದಾರೆ.










