ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಯಿ ಹಾಗೂ ನಾಗರ ಹಾವಿನ ಕಾಳಗದ ವೇಳೆ ಭೂಮಂಡಲದಲ್ಲಿ ವಿಭಿನ್ನವಾಗಿ ನಾಗರಹಾವು ಕಂಡು ಬಂದಿದ್ದು, ಸೂರ್ಯನ ಕಿರಣಕ್ಕೆ ಹಾವಿನ ತಲೆಯಲ್ಲಿ ಬೆಂಕಿಯಿರುವಂತೆ ಹೊಳೆಯುತ್ತಿರುವ ಅತ್ಯದ್ಭುತವಾಗಿರೋ ನಾಗರಾಜನ ವಿಡಿಯೋ ಇದೀಗ ವೈರಲ್ ಆಗಿದ್ದು, ಅವಿನಾಶ್ ಎಂಬುವರ ತೋಟದಲ್ಲಿ ಹಾವನ್ನು ನೋಡಿ ನಾಯಿ ಗರಂ ಆಗಿದ್ದು, ನಾಗರ ಹಾವು ಹಾಗೂ ನಾಯಿಯ ನಡುವೆ ಜಗಳ ನಡೆದಿದೆ. ಶ್ವಾನನ ಮೇಲೆ ನಾಗರಾಜ ರೋಷಾವೇಷವಾಗಿ ಹೋರಾಡಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ನಾಗರ ಹಾವು ಹಾಗೂ ನಾಯಿ ನಡುವೆ ಘರ್ಷಣೆ ನಡೆದಿದ್ದು,ನಾಯಿ ಸಹವಾಸವೇ ಬೇಡ ಎಂದು ನಾಗಣ್ಣ ವಾಪಸ್ ಆಗಿದೆ. ನಾಗರ ಹಾವು ಹಾಗೂ ನಾಯಿಯ ಜಗಳ ಕಂಡ ತೋಟದ ಮಾಲೀಕರು ದಂಗಾಗಿದ್ದಾರೆ.









