ಬೆಂಗಳೂರು: ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್ ಪೇದೆ ಸುದರ್ಶನ್ ಆಸ್ಕಿನ್ ಎಂಬುವರನ್ನು ಅಮಾನತು ಮಾಡುವಂತೆ ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ಅವರು ಆದೇಶ ಹೊರಡಿಸಿದ್ದು, ಗಿರಿನಗರ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ ಸುದರ್ಶನ್ ಆಸ್ಕಿನ್ ಎಂಬುವರು ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ವೈದ್ಯೆಯನ್ನು ಭೇಟಿಯಾಗಿದ್ದು, ಆ ವೇಳೆ ಮೊಬೈಲ್ ನಂಬರ್ ಪಡೆದು ವೈದ್ಯೆ ಬಳಿ ಪೋನಿನಲ್ಲಿ ಅಸಭ್ಯವಾಗಿ ಮಾತಾನಾಡುತ್ತಿದ್ದು, ಸಲುಗೆಯಿಂದ ವರ್ತಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ವೈದ್ಯೆ ಆರೋಪಿಸಿ ಈ ಹಿಂದೆ ಜ್ಞಾನ ಭಾರತಿ ಠಾಣೆಯಲ್ಲಿ ದೂರು ನೀಡಿದ್ದು, ಸೆಕ್ಷನ್ 354, 506 ಆಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮಾಡಿದ ಎಸ್.ಪಿ ಅಣ್ಣಾಮಲೈ ಅವರು ಸುದರ್ಶನ್ ಆಸ್ಕಿನ್ ನನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.










