ಬಳ್ಳಾರಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಶ್ರೀರಾಮುಲು ಅವರು ಮೈತ್ರಿ ಸರ್ಕಾರ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡಿದೆ. ಹಿಂದುಳಿದ ಸಮಾಜವನ್ನು ಕಾಂಗ್ರೆಸ್ ತುಳಿಯುತ್ತ ಬಂದಿದೆ. ಸಿದ್ದರಾಮಯ್ಯ ಅವರು ನನಗೆ ಕನ್ನಡ ಬರುವುದಿಲ್ಲ ಎನ್ನುತ್ತಾರೆ . ನಾನು ಮಾತನಾಡುವುದು ಗ್ರಾಮೀಣ ಸೊಗಡಿನ ಕನ್ನಡ .ನಾನು ಸಿದ್ದರಾಮಯ್ಯ ಅವರಷ್ಟು ಬುದ್ಧಿವಂತನಲ್ಲ ಎಂದು ಒಪ್ಪಿಕೊಳ್ಳುತ್ತೇನೆ . ಸಿದ್ದರಾಮಯ್ಯ ಅವರು ನನ್ನನ್ನು 420 ಅಂತಾರೆ. ಈ ರೀತಿ ಮಾತಾಡೋದು ಸರಿಯಲ್ಲ. ಚಂದ್ರಶೇಖರ್ ಅವರು ರಾಜೀನಾಮೆ ಕೊಡುವಂತೆ ಮಾಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.










