ಹೊರನಾಡು ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಇನ್ ಸ್ಪೆಕ್ಟರ್ ಸಚಿನ್ ನೇತೃತ್ವದಲ್ಲಿ ದಾಳಿ…

251
firstsuddi

ಮೂಡಿಗೆರೆ: ಹೊರನಾಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯ ಸೇರಿ ಪಡಿತರ ಚೀಟಿಯನ್ನು ಮಾಡಲು ಹಣ ಪಡೆದುಕೊಳ್ಳುತ್ತಿರುವ ಆಡಿಯೋ ಸಂಬಾಷಣೆ ಹಾಗೂ ದೂರಿನ ಹಿನ್ನಲೆಯಲ್ಲಿ ಬುಧವಾರ ಹೊರನಾಡು ಗ್ರಾಮ ಪಂಚಾಯಿತಿಗೆ ಲೋಕಯುಕ್ತ ಇನ್ಸ್‍ಪೆಕ್ಟರ್ ಸಚಿನ್ ದಾಳಿ ಮಾಡಿ ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.
ಕಳೆದ ಎರಡು ದಿನಗಳಿಂದ ಪಂಚಾಯಿತಿ ಅಧ್ಯಕ್ಷರು ಮತ್ತು ಅವರ ಪತಿ ಪಂಚಾಯಿತಿ ಸದಸ್ಯ ಇಬ್ಬರು ಸೇರಿ ಮಹಿಳೆಯೊರ್ವರ ಬಳಿ 4500 ಹಣ ಕೊಟ್ಟರೆ ಎರಡೇ ದಿನದಲ್ಲಿ ಬಿಪಿಎಲ್ ಕಾರ್ಡ್ ಮಾಡಿಸಿ ನಿಮ್ಮ ಮನೆ ಬಾಗಿಲಿಗೆ ತಂದುಕೊಡುತ್ತೇವೆ.ನಿವಾಗಿಯೇ ಹೋದರೆ ಕಾರ್ಡು ಮಾಡಲು ಸಾದ್ಯವಾಗುವುದಿಲ್ಲ.ಅಲ್ಲಿ ಅಧಿಕಾರಿಗಳಿಗೆ ದುಡ್ಡು ಕೊಟ್ಟರೆ ಸುಲಭವಾಗಿ ರೇಷನ್ ಕಾರ್ಡ್ ಆಗುತ್ತದೆ ಎನ್ನುವ ಸಂಬಾಷಣೆ ಸಾಮಾಜಿಕ ಜಾಲಾತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.ಅಲ್ಲದೆ ತಾಲ್ಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ರಫೀಕ್ ದೂರನ್ನು ಕೂಡ ನೀಡಿದ್ದರು.
ಈ ಬಗ್ಗೆ ಹೊರನಾಡು ಪಂಚಾಯಿತಿಗೆ ದಾಳಿ ಮಾಡಿದ ಲೋಕಾಯುಕ್ತ ಇನ್ ಸ್ಪೆಕ್ಟರ್  ಸಚಿನ್ ಸ್ಥಳಕ್ಕೆ ಅದ್ಯಕ್ಷೆ ಸನ್ಮತಿ ಮತ್ತು ಸದಸ್ಯ ವೃಷಭರಾಜ್ ಅವರನ್ನು ಕರೆಸಿ ವಿಚಾರಣೆಯನ್ನು ನಡೆಸಿದ್ದಾರೆ.ವಿಚಾರಣೆಯಲ್ಲಿ ಮಹತ್ವದ ದಾಖಲಾತಿಗಳನ್ನು ಕಲೆಹಾಕಿದ್ದಾರೆ ಈ ಸಂದರ್ಭದಲ್ಲಿ ವಿಚಾರಣೆಯಲ್ಲಿ ನಾವು ಅಮಾಯಕರು ಈ ಬಗ್ಗೆ ನಮಗೇನು ಗೊತ್ತಿಲ್ಲ.ನಾವು ಹಣವನ್ನು ಪಡೆದುಕೊಂಡಿಲ್ಲ ನಮಗೆ ತೊಂದರೆ ಕೊಡಬೇಡಿ ಎಂದು ಅಧ್ಯಕ್ಷರು ಮತ್ತು ಸದಸ್ಯ ಅಂಗಲಾಚಿಕೊಂಡಿದ್ದಾರೆ..
ಅಲ್ಲದೆ ಇದೇ ಸಂದರ್ಭದಲ್ಲಿ ಕಳಸ ನಾಡ ಕಚೇರಿಗೂ ಬೇಟಿ ನೀಡಿ ಅಲ್ಲಿಯೂ ವಿಚಾರಣೆ ನಡೆಸಿದ್ದಾರೆ.ಅದೇ ಸಂದರ್ಭದಲ್ಲಿ ಆದಾಯ ದಾಖಲಾತಿಗಾಗಿ ಮೂರು ತಿಂಗಳಿನಿಂದ ಅಲೆದಾಡುತ್ತಿದ್ದ ವೃದ್ಧರೊಬ್ಬರನ್ನು ಗುರುತಿಸಿ ಅವರಿಗೆ ಕೂಡಲೇ ಆದಾಯ ದಾಖಲಾತಿಯನ್ನು ಮಾಡಿಕೊಡುವಂತೆ ಕಳಸ ಉಪತಹಶಿಲ್ದಾರರಿಗೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಮದ್ಯಪಾನ ಮಾಡಿ ಆಸ್ಪತ್ರೆಗೆ ಬರುತ್ತಿದ್ದಾರೆಎನ್ನುವ ದೂರುಗಳು ಸಾರ್ವಜನಿಕರಿಂದ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬೇಟಿ ನೀಡಿದ್ದಾರೆ.ಆದರೆ ಆ ಸಂದರ್ಭದಲ್ಲಿ ವೈದ್ಯರು ಸ್ಥಳದಲ್ಲಿ ಇರಲಿಲ್ಲ.ಆಸ್ಪತ್ರೆಯ ಶುಚಿತ್ವ,ಹಾಗೂ ರೋಗಿಗಳ ದಾಖಲಾತಿಯನ್ನು ಪಡೆದು ಕಳಸ ಗ್ರಾಮ ಪಂಚಾಯಿತಿ ಬೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.