ಗಾಯಕಿ ವಸುಂಧರಾ ದಾಸ್ ಗೆ ಕ್ಯಾಬ್ ಚಾಲಕನಿಂದ ಕಿರುಕುಳ…

329
firstsuddi

ಬೆಂಗಳೂರು: ಖ್ಯಾತ ಗಾಯಕಿ ವಸುಂಧರಾ ದಾಸ್ ಅವರಿಗೆ ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಮಲ್ಲೇಶ್ವರಂನ ಮಾರ್ಗೊಸಾ ರಸ್ತೆಯಲ್ಲಿ ಅಕ್ಟೋಬರ್‌ 29 ರಂದು ಸಂಜೆ ಸುಮಾರು 4.30 ರ ವೇಳೆಗೆ ಇಟಿಯೋಸ್ ಕಾರು ಚಾಲಕನೊಬ್ಬ  ವಸುಂಧರಾ ದಾಸ್ ಅವರ ಕಾರನ್ನು ಹಿಂಬಾಲಿಸಿ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ವಸುಂಧರಾ ದಾಸ್ ಅವರು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ.  ಐಪಿಸಿ ಸೆಕ್ಷನ್ 509 341,364 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕ್ಯಾಬ್ ಚಾಲಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.