ಚಿಕ್ಕಮಗಳೂರು : ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆ ತಾಯಿ, ಮಗು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ. ಅನು(23) ಹಾಗೂ ದರ್ಶನ್ (2) ಮೃತ ದುರ್ದೈವಿಗಳು. ಇದೇ ತಿಂಗಳ 2ನೇ ತಾರೀಖು ವಿಜಯ ಬ್ಯಾಂಕ್ 50 ಸಾವಿರ ಸಾಲ ಮರುಪಾವತಿಗೆ ನೋಟಿಸ್ ನೀಡಿತ್ತು.ತೋಟ ಮಾರಿ ಸಾಲ ತೀರಿಸುವ ವಿಚಾರದಲ್ಲಿ ದಂಪತಿ ನಡುವೆ ಕಲಹವಿತ್ತು. ಈ ಹಿನ್ನಲೆಯಲ್ಲಿ ಇಂದು ಬೆಳಗ್ಗಿನ ಜಾವ ಅನು ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










