ಚಿಕ್ಕಮಗಳೂರು : ಇದೆ ಮೊದಲ ಬಾರಿಗೆ ಮಲೆನಾಡಿನಲ್ಲಿ ಅಪರೂಪದ ಹಾರುವ ಬೆಕ್ಕೊಂದು ಪತ್ತೆಯಾಗಿದ್ದು, ಜಿಲ್ಲೆಯ ಕೊಪ್ಪ ಸಮೀಪದ ಕೊರಡಿ ಎಸ್ಟೇಟ್ ಬಳಿ ತೋಟದ ಬೇಲಿಯ ತಂತಿಗೆ ಹಾರುವ ಬೆಕ್ಕು ಸಿಕ್ಕಿ ಹಾಕಿಕೊಂಡು ನರಳುತ್ತಿತ್ತು. ಈ ವೇಳೆ ಗ್ರಾಮಸ್ಥರು ಬೆಕ್ಕನ್ನು ರಕ್ಷಿಸಿದ್ದು, ಹಕ್ಕಿಗಳಂತೆ ಎರಡು ರೆಕ್ಕೆ ಇರುವ, ಹಾರುವ ಬೆಕ್ಕನ್ನು ಕಂಡು ಮಲೆನಾಡಿನ ಜನರು ಆಶ್ಚರ್ಯಗೊಂಡಿದ್ದಾರೆ. ಹಾರುವ ಬೆಕ್ಕು ದಟ್ಟ ಕಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.









