ಏರ್ ಇಂಡಿಯಾ ವಿಮಾನ  ಕಟ್ಟಡಕ್ಕೆ ಡಿಕ್ಕಿ, ಪ್ರಯಾಣಿಕರು ಅಪಾಯದಿಂದ ಪಾರು…

309
firstsuddi

ಸ್ಟಾಕ್ ಹೋಮ್:  ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಕಟ್ಟಡವೊಂದಕ್ಕೆ ಡಿಕ್ಕಿ  ಹೊಡೆದಿದ್ದು,  ವಿಮಾನದಲ್ಲಿ 179 ಪ್ರಯಾಣಿಕರಿದ್ದರು ಎನ್ನಲಾಗಿದ್ದು,ವಿಮಾನದ  ರೆಕ್ಕೆ ಗೇಟ್‌ ಗೆ  ತಾಗಿ  ಅಪಘಾತ ಸಂಭವಿಸಿದೆ.  ವಿಮಾನ ಇಳಿಯುವ ಟರ್ಮಿನಲ್ 5ರ 50 ಮೀಟರ್ ದೂರದಲ್ಲಿ ಅಪಘಾತ ನಡೆದಿದೆ. ಬಳಿಕ ಪ್ರಯಾಣಿಕರನ್ನು ಸಂಚಾರಿ ಮೆಟ್ಟಿಲಿನ ಸಹಾಯದಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸಲಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ