ಮದುವೆ ಮುರಿದುಬೀಳುವಂತೆ ಮಾಡಿದ ವಧುವಿನ ವಾಟ್ಸಪ್ ಫೋಟೋಗಳು, ಆದರೂ ನಡೆಯಿತು ಬೇರೊಬ್ಬ ಯುವಕನೊಂದಿಗೆ ವಧುವಿನ ವಿವಾಹ ..?

1225
firstsuddi

ಹಾಸನ : ವರನ ವಾಟ್ಸಪ್ ಗೆ ವಧುವಿನ ಮೂರೂ ಫೋಟೋಗಳು  ಬಂಡ ಕೂಡಲೇ ಫೋಟೋಗಳನ್ನು ನೋಡಿ ವರ ಹುಡುಗಿಯನ್ನು ಮದುವೆ ಆಗಲ್ಲ ಎಂದಿದ್ದು, ಹಿರಿಯರು ನಿಶ್ಚಯಿಸಿದ್ದ  ಮದುವೆ ಮುರಿದು ಬಿದ್ದು, ವಧುವನ್ನು ಬೇರೊಬ್ಬ ಯುವಕ ವಿವಾಹವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ಶೃತಿ ಹಾಗೂ ತಾರೇಶ್  ಎಂಬುವವರಿಗೆ  ಹಿರಿಯರು ಮದುವೆ  ನಿಶ್ಚಯಿಸಿದ್ದರು.  ಮದುವೆಯ ಎಲ್ಲಾ ಶಾಸ್ತ್ರಗಳು ನಡೆಯುತಿತ್ತು. ಇನ್ನೇನು ಕೆಲವೇ ಸಮಯದಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವರ ತಾರೇಶ್ ಅವರಿಗೆ ಅಪರಿಚಿತರು ವಾಟ್ಸಪ್  ಮೂಲಕ  ವಧು ಬೇರೊಬ್ಬ ಯುವಕನೊಂದಿಗೆ ಫೋಟೋ ತೆಗೆಸಿಕೊಂಡಿರುವುದನ್ನು  ಕಳುಹಿಸಿದ್ದಾರೆ. ಇದನ್ನು ನೋಡಿದ ತಾರೇಶ್ ನಾನು  ಈ ಹುಡುಗಿಯನ್ನು ಮದುವೆ ಆಗಲ್ಲ ಎಂದು ಮಂಟಪದಿಂದ  ಹೊರ ನಡೆದಿದ್ದಾರೆ. ವಧುವಿನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಠಾಣೆಗೆ ಶೃತಿ ಜೊತೆ   ಫೋಟೋದಲ್ಲಿದ್ದ ಅವಿನಾಶ್ ನನ್ನು ಪೊಲೀಸರು ಕರೆಸಿದ್ದಾರೆ. ನಡೆದ ವಿಷಯವನ್ನು ಅವಿನಾಶ್ ಗೆ ತಿಳಿಸಿದ್ದಾರೆ. ನಂತರ ಅವಿನಾಶ್  ತನ್ನಿಂದ ಯುವತಿ ಮದುವೆ ನಿಲ್ಲುವುದು ಬೇಡವೆಂದು ಶೃತಿಯನ್ನು ವಿವಾಹವಾಗಿದ್ದಾರೆ.