ಹಿರಿಯ ನಿರ್ದೇಶಕ ಎ.ಆರ್.ಬಾಬು ವಿಧಿವಶ…

307
firstsuddi

ಬೆಂಗಳೂರು:ಹಿರಿಯ ನಿರ್ದೇಶಕ ಎ.ಆರ್​.ಬಾಬು ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಎ.ಆರ್.ಬಾಬು ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಲ್ಲೆಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲೋ ಯಮ, ಸೇರಿದಂತೆ ಹಲವು ಚಿತ್ರಗಳನ್ನು ಎ.ಆರ್​.ಬಾಬು ಅವರು ನಿರ್ದೇಶನ ಮಾಡಿದ್ದರು.
ಎ.ಆರ್​.ಬಾಬು ಅವರ ನಿಧನಕ್ಕೆ ನಟ ಜಗ್ಗೇಶ್ ಅವರು ಸಂತಾಪ ಸೂಚಿಸಿದ್ದು ನನ್ನ ಆತ್ಮೀಯ ಸಹೋದರ ನಿರ್ದೇಶಕ ಎ.ಆರ್​.ಬಾಬು ಅವರು  ಯಾರದೋ ದುಡ್ಡು” ಕಾಸಿದ್ದವನೆ ಬಾಸ್” ನನ್ನೊಟಿಗೆ ಕಾರ್ಯಮಾಡಿದ್ದ..ನಿರ್ದೇಶಕ ಪ್ರೇಮ್ ನ ಪರಿಚಯಿಸಿದ ಮಹನೀಯ..ನಮ್ಮಿಬ್ಬರ ಗೆಳೆತನ 30ವರ್ಷದ್ದು..ನೋವಿನಿಂದ ವಿದಾಯ ಮಿತ್ರನಿಗೆ.. ಎಂದು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

firstsuddi