ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಡಿ.11 ರಂದು ಶಾಸಕ ಸಿ.ಟಿ.ರವಿಯವರಿಂದ ಚಾಲನೆ…

248
firstsuddi

ಚಿಕ್ಕಮಗಳೂರು: ನಗರದ ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ತಾಲ್ಲೂಕಿನ ಇಂದಿರಾ ನಗರದಲ್ಲಿ (ಎನ್.ಎಂ.ಡಿ.ಸಿ) ಡಿ.11 ರಿಂದ 17 ರವರೆಗೆ ನಡೆಯಲಿದೆ.
11 ರಂದು ಸಂಜೆ 5.30 ಕ್ಕೆ ಶಾಸಕ ಸಿ.ಟಿ.ರವಿ ಶಿಬಿರಕ್ಕೆ ಚಾಲನೆ ನೀಡಲಿದ್ದು, ಪ್ರಾಂಶುಪಾಲ ವಿನ್ಸೆಂಟ್ ಕಾಡೋಜಾó ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಲೇಜಿನ ಕಾರ್ಯದರ್ಶಿ ಫಾದರ್ ಪೀಟರ್ ಬ್ರಾಂಕ್, ಕುವೆಂಪು ವಿ.ವಿ ಯ ಎನ್.ಎಸ್.ಎಸ್. ಸಂಯೋಜನಾಧಿಕಾರಾಗಿ ಕೆ.ವಿ.ಗಂಗಾಧರ್, ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ತಾ.ಪಂ.ಅಧ್ಯಕ್ಷ ಜಯಣ್ಣ, ಗ್ರಾ.ಪಂ. ಸದಸ್ಯೆ ಬೇಬಿ ಕೃಷ್ಣ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
12 ರಂದು ಬೆಳಿಗ್ಗೆ 8.30 ಕ್ಕೆ ವಿದ್ಯಾರ್ಥಿಗಳಿಂದ ಶ್ರಮದಾನ, 10 ಗಂಟೆಗೆ ಆರೋಗ್ಯ ತಪಾಸಣೆ, ಮದ್ಯಾಹ್ನ 3 ಗಂಟೆಗೆ ಉಪನ್ಯಾಸ, 13 ರಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ.ಆರ್.ಅಜಿತ್ ಅವರಿಂದ ಆರ್ಥಿಕ ವ್ಯವಹಾರ ನೀತಿ ಕುರಿತ ಉಪನ್ಯಾಸ ಜರುಗಲಿದೆ.
14 ರಂದು ಮದ್ಯಾಹ್ನ 3 ಗಂಟೆಗೆ ರಂಗಕಲಾವಿದ ರಮೇಶ್ ಬಂಗಾರ್ ಅವರಿಂದ ರಂಗ ತರಬೇತಿ, 15 ರಂದು ಮದ್ಯಾಹ್ನ 3 ಗಂಟೆಗೆ ಫಾದರ್ ಮಾರ್ಸೆಲ್ ಪಿಂಟೋ ಅವರಿಂದ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನಡೆಯಲಿದೆ.
16 ರಂದು ಮದ್ಯಾಹ್ನ 3 ಗಂಟೆಗೆ ಡಾ|| ಭಾಗ್ಯಲಕ್ಷ್ಮೀ ಅವರಿಂದ ಉಪನ್ಯಾಸ, 17 ರಂದು ಸಂಜೆ 6 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ, ಪ್ರತಿದಿನ ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಂ.ಎ.ವಿನಯ್ ಕುಮಾರ್ ತಿಳಿಸಿದ್ದಾರೆ.