ಯಶ್ ಮಗಳಿಗೆ ಅಂಬಿ ಆರ್ಡರ್ ಮಾಡಿದ್ದ ಗಿಫ್ಟ್​ ಏನು ಗೊತ್ತಾ..?

339
firstsuddi

ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮಗಳಿಗೆ ಅಂಬರೀಶ್ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ರಾಧಿಕಾ ಪಂಡಿತ್ ಅವರ ಸೀಮಂತದ ಸಂದರ್ಭದಲ್ಲೇ ಅವರ ಮಗುವಿಗಾಗಿ ಸುಮಾರು 1.50 ಲಕ್ಷ ಮೌಲ್ಯದ ತೊಟ್ಟಿಲನ್ನು ಅಂಬಿ ಆರ್ಡರ್ ಮಾಡಿದ್ದರು. ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಮೊನ್ನೆಯಷ್ಟೆ ಅಂಬರೀಷ್​ ಅವರ ಮೊಬೈಲ್ ​ಗೆ ತೊಟ್ಟಿಲು ರೆಡಿಯಾಗಿದೆ ಎಂದು ಮೆಸೇಜ್​ ಬಂದಿತ್ತು. ಇದನ್ನು ನೋಡಿದ ಸುಮಲತಾ ಅವರು ಯಶ್ ​ಗೆ ಕರೆ ಮಾಡಿ ​ ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.